ಕಲ್ಲುಗುಂಡಿ: ದಾನಿಗಳ ಸಹಕಾರದಿಂದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅವರ ನೇತೃತ್ವದಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಅ.23 ರಂದು ನಡೆಯಿತು. ಜಿ.ಕೆ.ಹಮೀದ್ ಗೂನಡ್ಕ ನೇತೃತ್ವದಲ್ಲಿ ಹಕೀಮ್ ತಂಙಳ್ ಆದೂರ್, ತಾಜ್ ಮಹಮದ್, ಗುತ್ತಿಗೆದಾರ ಕಾಸರಗೋಡಿನ ನಿಝಾರ್ ಪೌವ್ವಲ್, ರಫೀಕ್ ಕೆ.ಎಂ ಮುತುವರ್ಜಿ ವಹಿಸಿ
ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ ನಿವಾಸಿ ಎ ಎಚ್. ಹಸೈನಾರ್ ಅವರ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿ

ಕೊಡಲಾಗಿದೆ. ಮನೆಯ ಕೀ ನೀಡಿ ಮನೆ ಹಸ್ತಾಂತರ ಮಾಡಲಾಯಿತು. ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಹಾಗು ನಿಝಾರ್ ಪೌವ್ವಲ್ ಅವರು ರಿಬ್ಬನ್ ಕಟ್ ಮಾಡಿ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಯ್ಯದ್ ಹಕೀಮ್ ತಂಙಳ್ ಆದೂರ್ ಗೃಹ ಪ್ರವೇಶದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಸಿದರು. ಕಲ್ಲುಗುಂಡಿ ಜುಮಾ ಮಸೀದಿಯ ಖತೀಬ್ ನಹೀಮ್ ಫೈಝಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮರ್ ಬೀಜದ ಕಟ್ಟೆ, ಕಾರ್ಯದರ್ಶಿ ರಹೀಂ ಬೀಜದಕಟ್ಟೆ, ಪಂಚಾಯತ್ ಸದಸ್ಯರಾದ ಜಗದೀಶ್ ರೈ, ಎಸ್. ಕೆ. ಹನೀಫ್, ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ವಿಮಲಾ ಪ್ರಸಾದ್, ಮಾಜಿ ಅಧ್ಯಕ್ಷರಾದ ಯಮುನಾ. ಬಿ. ಎಸ್. ಪದ್ಮಯ್ಯ ಗೌಡ ಬೋಳುಗಲ್ಲು, ಇ.ವಿ.ಪ್ರಶಾಂತ್ ಕಲ್ಲುಗುಂಡಿ, ಕಿಶೋರ್ ಕುಮಾರ್, ಅಯ್ಯೂಬ್, ಸುನಿಲ್ ಕುಮಾರ್, ದುರ್ಗಾ ಪ್ರಸಾದ್, ದಿನಕರ ಗೌಡ ಸಣ್ಣಮನೆ, ಅಬ್ಬಾಸ್ ಸಂಟ್ಯಾರ್, ಇಬ್ರಾಹಿಂ ಎ. ಕೆ . ಹಸೈನಾರ್ ಎ. ಕೆ. ಸಲೀಂ ಪೆರುಂಗೋಡಿ, ಸಿರಾಜ್ ಕರಾವಳಿ. ಮೊದಲದವರು ಭಾಗವಹಿಸಿ ಶುಭ ಹಾರೈಸಿದರು.