ಬೆಳ್ಳಾರೆ:ಬೆಳ್ಳಾರೆಯ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯ ಬೇರೆ ಕಡೆಗೆ ಸ್ಥಳಾಂತರ ಆಗುತ್ತಿರುವ ಬಗ್ಗೆ ಹೇಳಲಾಗುತಿದೆ. ವಸತಿ ನಿಲಯವನ್ನು ಸ್ಥಳಾಂತರ ಮಾಡದಂತೆ ಮತ್ತು ಬೆಳ್ಳಾರೆಯಲ್ಲಿಯೇ ಉಳಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಿಗೆ
ಮನವಿ ನೀಡಿ ಅವರ ಗಮನಕ್ಕೆ ತರಲಾಗುವುದು.ವಸತಿ ನಿಲಯ ಸ್ಥಳಾಂತರ ಆಗದಂತೆ ಎಲ್ಲಾ ಕ್ರಮ ಕೈ ಗೊಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ. ಈ ವಸತಿ ನಿಲಯ ಮಂಜೂರು ಗೊಂಡು 5 ವರುಷ ಕಳೆದರೂ ಇದಕ್ಕೆ ಸ್ವಂತ ಕಟ್ಟಡ ಆಗಿಲ್ಲ. ಇದಕ್ಕೆ ಕಟ್ಟಡ ನಿರ್ಮಿಸಿ ಇಲ್ಲೇ ಶಾಶ್ವತ ವಾಗಿ ಉಳಿಸುವಂತೆ ಸಚಿವರಿಗೆ ಮನವಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.