ಚೆನ್ನೈ:ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್ನಲ್ಲಿ
ಜಪಾನ್ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಹಾಕಿ ತಂಡ ಫೈನಲ್ಗೆ ಪ್ರವೇಶಿಸಿದೆ.ಐದನೇ ಬಾರಿ ಚಾಂಪಿಯನ್ಸ್ ಟ್ರೋಫಿ
ಫೈನಲ್ಗೆ ತಲುಪಿರುವ 3 ಬಾರಿಯ ಚಾಂಪಿಯನ್ ಭಾರತ ಶನಿವಾರ (ಆ.12) ಮಲೇಶ್ಯವನ್ನು ಎದುರಿಸಲಿದೆ. ಶುಕ್ರವಾರ ನಡೆದ 2ನೇ ಸೆಮಿ ಫೈನಲ್ ಪಂದ್ಯದುದ್ದಕ್ಕೂ ಭಾರತ ಮೇಲುಗೈ ಸಾಧಿಸಿತು.
ಆಕಾಶ್ದೀಪ್ ಸಿಂಗ್ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಗೋಲು ಖಾತೆ ತೆರೆದರು.ನಾಯಕ ಹರ್ಮನ್ಪ್ರೀತ್ ಸಿಂಗ್(23ನೇ ನಿಮಿಷ), ಮನ್ದೀಪ್ ಸಿಂಗ್(30ನೇ ನಿಮಿಷ) , ಸುಮಿತ್ (39ನೇ ನಿಮಿಷ) ಹಾಗೂ ಸ್ಥಳೀಯ ಆಟಗಾರ ಕಾರ್ತಿ ಸೆಲ್ವಂ (51ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಭಾರತಕ್ಕೆ 5-0 ಗೆಲುವು ತಂದುಕೊಟ್ಟರು.