ಸುಳ್ಯ: ಮರ್ಕಂಜ ಪ್ರೌಡ ಶಾಲೆಯಲ್ಲಿ ನಡೆದ ಗಾಂಧಿನಗರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅರಂತೋಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಾದ ಅರ್ಜುನ್ ಡಿ, ಲೋಚನ್ ಯು.ಆರ್., ಲಿಖಿತ್ ಎ.ಬಿ., ಚವನ್ ಎ.ಡಿ., ರೇಶ್ಮಾ, ಸಿಂಚನಾ, ಹಾಗೂ ವೀಕ್ಷಿತಾರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಮತ್ತು ಶಾಲೆಗೆ ಸಮಗ್ರ ಪ್ರಶಸ್ತಿಯನ್ನು ತಂದುಕೊಟ್ಟಿರುತ್ತಾರೆ. ವಿದ್ಯಾರ್ಥಿಗಳಿಗೆ ತರಬೇತುದಾರರಾಗಿ ಶಾಲಾ ದೈಹಿಕ ಶಿಕ್ಷಕಿ ಸರಸ್ವತಿ, ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಬನ, ಶಿಕ್ಷಕಿಯರಾದ ಭಾನುಮತಿ, ಅಶ್ವಿನಿ, ಶಾರದ ನೀಡಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post