ಸುಳ್ಯ:ಜನವರಿ 18 ರಿಂದ ಫೆಬ್ರವರಿ 2ರವರೆಗೆ ಸುಳ್ಯ ತಾಲೂಕಿನ 14ಕಡೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಇದರ ಆಯೋಜನಾ ಸಮಿತಿಯ ಉದ್ಘಾಟನೆ ಜ.3ರಂದು ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು. ಹಿಂದೂ ಸಂಗಮ ಆಯೋಜನಾ

ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ತಾಲೂಕಿನ ಪ್ರತೀ ಗ್ರಾಮದಿಂದ ನಿರ್ವಹಣಾ ತಂಡದ ಸದಸ್ಯರು ಉಪಸ್ಥಿತರಿದ್ದರು. ತಂಡದ ಸದಸ್ಯರಿಗೆ ಹಿಂದೂ ಸಂಗಮ ಕಾರ್ಯಕ್ರಮದ ಯೋಜನೆಯ ಪ್ರಶಿಕ್ಷಣವನ್ನು ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ ಇವರು ನಡೆಸಿ ಕೊಟ್ಟರು. ವೇದಿಕೆಯಲ್ಲಿ ಸುಳ್ಯ ತಾಲೂಕು ಸಂಘಚಾಲಕರಾದ ಚಂದ್ರಶೇಖರ ತಳೂರು ಉಪಸ್ಥಿತರಿದ್ದರು.












