ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮಾತನಾಡಿ ಹಿಂದಿ ಮಧುರವಾದ ಭಾಷೆ, ಹೆಮ್ಮೆಯ ಭಾಷೆ. ಈ ಭಾಷೆಯನ್ನು ನಾವು ನೀವೆಲ್ಲರೂ ಬೆಳಗಿಸೋಣ ಎಂದು ಹೇಳಿದರು.
ಹಿಂದಿ ಶಿಕ್ಷಕಿ ಲಕ್ಷ್ಮಿ ಲಾವಣ್ಯ ಹಿಂದಿಯು 1500 ವರ್ಷಕ್ಕಿಂತಲೂ
ಪುರಾತನವಾದ ಭಾಷೆ. ಈ ಭಾಷೆಯನ್ನು ಎಲ್ಲಾ ಕಡೆ ಪ್ರಚಾರ ಮಾಡಿ, ಭಾರತದಾದ್ಯಂತ ಪಸರಿಸೋಣ ಎಂದು ಹೇಳಿದರು. 5ನೇ ತರಗತಿಯ ಐಶಾನಿ ಕೆ ಆರ್ ಹಿಂದಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ದಿನದ ವಿಶೇಷತೆಯ ಕುರಿತು ರಿತನ್ಯ ಲಕ್ಷ್ಮಿ ಕೆ ಎಚ್ ತಿಳಿಸಿದರೆ, ಈ ದಿನದ ಚಿಂತನೆಯನ್ನು ಅನ್ವಿ ಕೆ ಆರ್ ಮಂಡಿಸಿದರು.
ಈ ಕಾರ್ಯಕ್ರಮವನ್ನು 5ನೇ ತರಗತಿಯ ಅಮೇಯ ಭಾರದ್ವಾಜ್ ನಿರೂಪಿಸಿ, ವೇದ್ಯ ಕೆ ಡಿ ಸ್ವಾಗತಿಸಿ, ಆರ್ಯನ್ ಎಂ ವಿ ವಂದಿಸಿದನು.ಹಿಂದಿ ಶಿಕ್ಷಕಿಯರಾದ ಅನಸೂಯ ಮತ್ತು ಲಲಿತಾ ಭಟ್ ಸಹಕರಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.





