ಸುಳ್ಯ: ಸುಳ್ಯ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಜ.25ರಂದು 6 ಕಡೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.ಹಿಂದೂ ಸಂಗಮ ಸುಳ್ಯ ಮಂಡಲ ವತಿಯಿಂದ ಸುಳ್ಯದಲ್ಲಿ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ ನಡೆಯಿತು.
ಪ್ರಭು ಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು
ಹಿರಿಯ ಸಾಹಿತಿ ಜಯಮ್ಮ ಬಿ.ಚೆಟ್ಟಿಮಾಡ ಉದ್ಘಾಟಿಸಿದರು. ಸುಳ್ಯ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಗಣಪತಿ ಹೆಗಡೆ ದಿಕ್ಸೂಚಿ ಭಾಷಣ ಮಾಡಿದರು.

ಹಿರಿಯ ದೈವನರ್ತಕರಾದ ಕೇಪು ಅಜಿಲ ಮುಖ್ಯ ಅತಿಥಿಗಳಾಗಿದ್ದರು.
ಹಿಂದೂ ಸಂಗಮದ ಗೌರವ ಸಲಹೆಗಾರರಾದ ಡಾ.ಗಿರೀಶ್ ಭಾರದ್ವಾಜ್, ಡಾ.ಯಶೋಧ ರಾಮಚಂದ್ರ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಡಾ.ಚಂದ್ರಶೇಖರ ನಲ್ಲೂರಾಯ, ಸುಳ್ಯ ಮಂಡಲ ನಿರ್ವಹಣಾ ಸಂಯೋಜಕರಾದ ಕುಸುಮಾಧರ ಎ.ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ಮಂಡಲ ಸಂಚಾಲಕರಾದ ಎ.ಟಿ.ಕುಸುಮಾಧರ, ಸ್ವಾಗತಿಸಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಾಸ್ತಾವಿಕವಾಗಿ ಮಾತನಾಡಿದರು..ಸುಳ್ಯ ಮಂಡಲ ಸಂಚಸಹ ಸಂಚಾಲಕ ಸುನಿಲ್ ಕೇರ್ಪಳ ವಂದಿಸಿದರು.
ಸಮಾರಂಭಕ್ಕೆ ಮುನ್ನ

ಜ್ಯೋತಿ ವೃತ್ತದಿಂದ ಪ್ರಭು ಮೈದಾನದವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಿತು.
ಜ.25ರಂದು ಸುಳ್ಯ ನಗರ, ಪೆರಾಜೆ, ಅಜ್ಜಾವರದ ಮೇನಾಲ, ಜಾಲ್ಸೂರು, ಪಂಜ ಹಘು ದೊಡ್ಡತೋಟದ ಎಲಿಮಲೆ ಹೀಗೆ ಒಟ್ಟು 6 ಕಡೆಗಳಲ್ಲಿ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.













