ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಜುಲೈ 3 ರಂದು ಭಾರೀ ಮಳೆಯಾಗುತಿದೆ. ಮುಂಗಾರು ಬಿರುಸುಗೊಂಡಿದ್ದು ಮಧ್ಯಾಹ್ನದ ಬಳಿಕ ನಿರಂತರ ಭಾರೀ ಮಳೆ ಸುರಿಯುತಿದೆ. ಭಾರೀ ಮಳೆಯಿಂದಾಗಿ ಮಳೆಯ ನೀರು ರಸ್ತೆಗಳಲ್ಲಿ ತುಂಬಿ ಹರಿಯುತಿದೆ. ಹಲವು ರಸ್ತೆಗಳು
ಜಲಾವೃತವಾಗಿದೆ. ಚರಂಡಿಗಳಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿದು ಕೃತಕ ನೆರೆಯ ಪರಿಸ್ಥಿತಿ ನಿರ್ಮಾಣ ಆಗಿದೆ. ಸುಳ್ಯ- ಬೆಳ್ಳಾರೆ ರಸ್ತೆಯಲ್ಲಿ ಐವರ್ನಾಡು-ಬೆಳ್ಳಾರೆ ಮಧ್ಯದಲ್ಲಿ ರಸ್ತೆ ಬದಿಯ ಚರಂಡಿಗಳು ತುಂಬಿ ಮೂರು ಕಡೆ ಕೃತಕ ನೆರೆ ಸೃಷ್ಟಿಯಾಗಿದೆ. ಭಾರೀ ಪ್ತಮಾಣದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಸಮಸ್ಯೆಯನ್ನ ನಿವಾರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಚರಂಡಿಗಳು ಮುಚ್ಚಿ ಹೋಗಿ ನೀರು ರಸ್ತೆಯಲ್ಲಿಯೇ ಹರಿಯುತಿದೆ.