ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ಭಾರೀ ಮಳೆಯಾಗಿದೆ. ಸಂಜೆ 6 ಗಂಟೆಯ ಬಳಿಕ ಧಾರಾಕಾರ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಮಳಯಾಗಿದೆ. 70 ಮಿಮಿಗಿಂತ ಅಧಿಕ ಮಳೆಯಾಗಿದೆ ಎಂದು ಮಳೆ ದಾಖಲಿಸುವ ಶ್ರೀಧರ ರಾವ್ ಹೈದಂಗೂರು ತಿಳಿಸಿದ್ದಾರೆ.ಸುಳ್ಯ ತಾಲೂಕಿನ ವಿವಿಧೆಡೆ
ಶನಿವಾರ ಸಂಜೆ ಧಾರಕಾರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಡಬ ಹಾಗೂ ಸುಬ್ರಹ್ಮಣ್ಯದಲ್ಲಿಯೂ ಭರ್ಜರಿ ಮಳೆ ಸುರಿದಿದೆ. ಶನಿವಾರ ಸಂಜೆ ವರೆಗೆ ಬಿಸಿಲ ವಾತವಾರಣ ಇದ್ದ ಸುಳ್ಯ ತಾಕೂಕಿನಲ್ಲಿ ಶನಿವಾರ ಸಂಜೆ ವೇಳೆ ಮಳೆ ಆರಂಭಗೊಂಡಿದೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ರಾತ್ರಿಯೂ ವಿವಿಧಡಡ ಧಾರಕಾರ ಮಳೆ ಮುಂದುವರಿದಿದೆ. ವಿವಿಧ ಭಾಗಗಳ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಧಾರಕಾರ ಮಳೆಯಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು, ದೇವಚಳ್ಳ, ಎಲಿಮಲೆ, ಮರ್ಕಂಜ, ವಳಲಂಬೆ ಮತ್ತಿತರ ಕಡೆಗಳಲ್ಲಿ ಧಾರಕಾರ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಐವರ್ನಾಡು, ಕೊಲ್ಲಮೊಗ್ರು, ಅರಂತೋಡು ಪರಿಸರದಲ್ಲೂ ಉತ್ತಮ ಮಳೆಯಾಗಿದೆ. ವಿವಿಧ ಕಡೆ ಮಳೆ ಆವಾಂತರ ಸೃಷ್ಠಿಸಿದೆ. ರಸ್ತೆ,ಚರಂಡಿಗಳು ತುಂಬಿ ಹರಿದಿದೆ.









