ಸುಳ್ಯ: ಸುಳ್ಯದಲ್ಲಿ ಸೆ.26ರಂದು ಭರ್ಜರಿ ಮಳೆಯಾಗಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಭಾರೀ ಮಳೆ ಸುರಿದಿದೆ. ಬೆಳಿಗ್ಗಿನಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನ ನಂತರ

ಮಳೆ ಆರಂಭವಾಗಿದೆ. ನಿರಂತರ ಸುರಿದ ಕಾರಣ ನಗರದಲ್ಲಿ ಮಳೆ ನೀರು ತುಂಬಿ ಹರಿದಿದೆ. ಅಲ್ಲಲ್ಲಿ ಜಲಾವೃತವಾಗಿದೆ. ಚರಂಡಿಗಳ ಅವ್ಯವಸ್ಥೆಯಿಂದ ಮಳೆ ನೀರು ರಸ್ತೆಯಲ್ಲಿಯೇ ತುಂಬಿ ಹರಿದಿದೆ. ವಿವಿಧ ಕಡೆಗಳಲ್ಲಿ ನೀರು ನುಗ್ಗಿದೆ. ಚರಂಡಿ ನೀರು ರಸ್ತೆಯಲ್ಲಿಯೇ ತುಂಬಿ ಹರಿದು ವಾಹನಗಳು ಓಡಾಡುವ ಸಂದರ್ಭದಲ್ಲಿ ಕೆಸರು ನೀರು ಸಿಂಚನವಾಗುತ್ತಿತ್ತು.
ಚಿತ್ರ:ನವೀನ್ ‘ಸ್ಟುಡಿಯೋ ಗೋಪಾಲ್‘






