ಸುಳ್ಯ: ಭಾರೀ ಬಿಸಿಲು ಮತ್ತು ಉಷ್ಣಾಂಶದ ವಾತಾವರಣ ಮುಂದುವರಿದಿದ್ದು ಮಾ. 6ರಂದು 41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ. ಸುಳ್ಯದಲ್ಲಿ ಮಧ್ಯಾಹ್ನದ ವೇಳೆಗೆ ಹಲವು ಕಡೆಯಲ್ಲಿ 40-41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದೆ. ಬಿಸಿಲಿನ ಕೆನ್ನಾಲಿಗೆ
ಉರಿಯುವ ಬೆಂಕಿಯಂತೆ ಭಾಸವಾಗಿದೆ. ದಿನೇ ದಿನೇ ಉಷ್ಣಾಂಶ ಏರಿಕೆಯಾಗುತ್ತಿದ್ದು 11 ಗಂಟೆಯಿಂದಲೇ ಭಾರೀ ಬಿಸಿಲಿನ ವಾತಾವರಣ ಮುಂದುವರಿದಿದ್ದು.1 ಗಂಟೆಯ ವೇಳೆಗೆ ಬಿಸಿಲ ಬೇಗೆ ಮತ್ತಷ್ಟು ಏರಿದ್ದು 41 ಡಿಗ್ರಿ ಸೆಲ್ಸಿಯಸ್ವರೆಗೆ ಏರಿತ್ತು. ಕಳೆದ 3-4 ದಿನಗಳಿಂದ ಹಗಲಿನ ವೇಳೆ ಉಷ್ಣಾಂಶ 39-40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.ತೀವ್ರ ತಾಪಮಾನ ಏರಿಕೆಯಿಂದ ಜನರು ಬಸವಳಿಯುವ ಸ್ಥಿತಿ ನಿರ್ಮಾಣವಾಗಿದೆ.