*ಪಿ.ಜಿ.ಎಸ್.ಎನ್.ಪ್ರಸಾದ್.
ಸುಳ್ಯ: ಕತ್ತಲು ಕವಿದು, ಕುಳಿರ್ಗಾಳಿಯೊಂದಿಗೆ ಜಿನುಗುವ ಹನಿ ಮಳೆಯೊಂದಿಗೆ ಮಳೆಗಾಲದ ವಾತಾವರಣ ಸೃಷ್ಠಿಯಾಗಿದ್ದು ಸುಳ್ಯದಲ್ಲಿ ಗುರುವಾತ ಸಾಧಾರಣ ಮಳೆಯಾಗುತಿದೆ. ಬೆಳಿಗ್ಗಿನಿಂದ ನಿರಂತರ ಸಾಶಾರಣ ಮಳೆ ಸುರಿಯುತಿದೆ. ಇಡೀ ದಿನ ಮಳೆಯ ವಾತಾವರಣ ಇರಲಿದ್ದು ಸಂಜೆಯ ವೇಳೆಗೆ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ.
ಮೊನ್ನೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿದು ಇನ್ನೇನು ಮುಂಗಾರು ಪ್ರಬಲಗೊಂಡಂತೆ ಭಾಸವಾಗಿತ್ತು. ಆದರೆ ನಿನ್ನೆ ಎಲ್ಲೂ ನಿರೀಕ್ಷಿತ
ಪ್ರಮಾಣದಲ್ಲಿ ಉತ್ತಮ ಮಳೆಯಾಗಿಲ್ಲ. ಹಗಲು ಹೆಚ್ಚು ಕಡಿಮೆ ಬಿಸಿಲಿನ ವಾತಾವರಣ ಇತ್ತು. ರಾತ್ರಿ ಹೆಚ್ಚಿನ ಕಡೆಗಳಲ್ಲಿ ಸಣ್ಣ ಪುಟ್ಟ ಮಳೆ ಬಂದಿದೆ. ಕಾಸರಗೋಡಿನ ಪರಿಸರದಲ್ಲಿ ರಾತ್ರಿ ಚೆನ್ನಾಗಿ ಮಳೆಯಾಗಿದೆ. ಇಂದು ಬೆಳಿಗ್ಗೆ 8 ಗಂಟೆಯವರೆಗೆ 24 ಗಂಟೆಯಲ್ಲಿ ದ.ಕ ಜಿಲ್ಲೆಯಲ್ಲಿ ಸರಾಸರಿ ಮಳೆ 10 ಮಿ.ಮೀ. ದಾಖಲಾಗಿತ್ತು. ಕಲ್ಲಕಟ್ಟ 35 ಮಿ.ಮಿ. ಕೈರಂಗಳದಲ್ಲಿ 25 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.
ಮುಂದಿನ 5 ದಿನ ಉತ್ತಮ ಮಳೆಯ ನಿರೀಕ್ಷೆ:
ಮುಂದಿನ 5 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಕರಾಳಿಯಲ್ಲಿ ಬಿರುಗಾಳಿ ಸಹಿತ ಮಲೆಯಾಗಲಿದೆ. ಬಿರುಗಾಳಿ ಗಂಟೆಗೆ 40-45 ಕಿ.ಮೀ ವೇಗದಲ್ಲಿ ಬೀಸಸಲಿದೆ ಎಂದು ಹೇಳಿದೆ. ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.