*ಪಿ.ಜಿ.ಎಸ್.ಎನ್.ಪ್ರಸಾದ್.
ವಿಚಿತ್ರ ಆದರೂ ಸತ್ಯ.. ನಿನ್ನೆ ಬಳ್ಪ ಪಟೋಳಿಯಲ್ಲಿ 61 ಮಿ.ಮೀ ನಷ್ಟು ಭರ್ಜರಿ ಮಳೆಯಾದರೆ ಅಕ್ಕ ಪಕ್ಕದ ಬಳ್ಪ, ಕೇನ್ಯದಲ್ಲಿ 15,16 ಮಿ.ಮೀ ಮಳೆ. ಅದಕ್ಕೇ ಅನ್ನುವುದು ‘ವರುಣಾ.. ಏನಿದು ನಿನ್ನಯ ಲೀಲೆ’ ಅಂತ. ಕಾರ್ಕಳ- ಬಜಗೋಳಿಯಲ್ಲಿ 45, ಗುತ್ತಿಗಾರು- ಮೆಟ್ಟಿನಡ್ಕದಲ್ಲಿ 37 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ. ಮೋಡ ಮಳೆಯ ವಾತಾವರಣ
ಇದ್ದ ನಿನ್ನೆ ಕಡಬ, ಸುಳ್ಯ ತಾಲೂಕಿನಲ್ಲಿ ಸರಾಸರಿ 21 ಮಿ.ಮೀ.ನಷ್ಟು ಮಳೆಯಾಗಿದೆ. ಉಳಿದಂತೆ ಸರ್ವೆ 34, ಪುತ್ತೂರು-ಬಂಗಾರಡ್ಕ 30, ಬಂಟ್ವಾಳ-ಕೆಲಿಂಜ 26, ಪುತ್ತೂರು-ಪಾಣಾಜೆ 25, ಮುಂಡೂರು 25, ಮಿತ್ತೂರು 21, ಬೆಳ್ತಂಗಡಿ (ಚರ್ಚ್ ರಸ್ತೆ) 24, ಅಡೆಂಜ- ಉರುವಾಲು 21, ಕುಂಬ್ಳೆ-ಎಡನಾಡು 27, ಕಾಸರಗೋಡು-ಕಲ್ಲಕಟ್ಟ 22, ಬಲ್ನಾಡು 14, ಕೊಳ್ತಿಗೆ-ಎಕ್ಕಡ್ಕ 10, ಶಾಂತಿಗೋಡು,ಕೈರಂಗಳ 09 ಮಿ ಮೀ ಮಳೆ ದಾಖಲಾಗಿದೆ.
“ಆದರೆ ಆರ್ದ್ರಾ.. ಇಲ್ಲವಾದರೆ ದರಿದ್ರ…” ಇಂದು ಕೂಡಾ ಹೆಚ್ಚು ಕಡಿಮೆ ನಿನ್ನೆ ಯದೇ ವಾತಾವರಣ ಇರಲಿದೆ ಭಾರೀ ಮಳೆಯ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಧಾರಾಕಾರ ಮಳೆಯ ಸಾಧ್ಯತೆ:
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ವ್ಯಾಪ್ತಿಯಲ್ಲಿ ಬಿರುಗಾಳಿ ವೇಗವು ಗಂಟೆಗೆ 45 ಕಿ.ಮೀನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆ ಆಗಲಿದೆ. ರಾಜ್ಯದ ವಿವಿಧ ಕಡೆ ನಿನ್ನೆ ಮಳೆಯಾಗಿದೆ.