*ಪಿ.ಜಿ.ಎಸ್.ಎನ್.ಪ್ರಸಾದ್.
ಆರ್ದ್ರಾ ನಕ್ಷತ್ರ (ಜೂನ್ 22) ಆರಂಭ ಆದಲ್ಲಿಂದ ನಿಧಾನವಾಗಿ ಮಳೆಗಾಲ ತನ್ನ ವೈಭವವನ್ನು ಕಂಡುಕೊಳ್ಳತೊಡಗಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದ ಕಾಸರಗೋಡು, ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕಿನ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಹಳ್ಳ ಕೊಳ್ಳಗಳು ಇನ್ನಷ್ಟೇ
ತುಂಬಿ ಹರಿಯಬೇಕಾಗಿದೆ. ಬೆಳ್ತಂಗಡಿ (ಚರ್ಚ್ ರಸ್ತೆ) 68, ಬೆಳ್ತಂಗಡಿ ನಗರ 60, ಉಡುಪಿ-ಗುಂಡಿಬೈಲು 58, ಸುಳ್ಯ ತಾಲೂಕಿನ ಮೆಟ್ಟಿನಡ್ಕ 54, ಕಲ್ಲಾಜೆ 53, ಹರಿಹರ-ಮಲ್ಲಾರ 50, ಉಬರಡ್ಕ 49, ಸುಬ್ರಹ್ಮಣ್ಯ (2) 46, ದೊಡ್ಡತೋಟ 43, ಮಡಪ್ಪಾಡಿ 42, ಸುಳ್ಯ ನಗರ 40, ಅಯ್ಯನಕಟ್ಟೆ 39, ಮರ್ಕಂಜ 38, ಬಾಳಿಲ 37, ಪಂಬೆತ್ತಾಡಿ-ನೆಕ್ರಕಜೆ 35, ಕೇನ್ಯ 34, ಗುತ್ತಿಗಾರು-ಕಮಿಲ, ಕಲ್ಮಡ್ಕ ತಲಾ 33, ದೇರಂಪಾಲು- ಬಾಳಿಲ 31, ಬೆಳ್ಳಾರೆ-ಕಾವಿನಮೂಲೆ, ಸುಬ್ರಹ್ಮಣ್ಯ(1), ಬಳ್ಪ, ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ ತಲಾ 30, ಕಟ್ಟ-ಕೊಲ್ಲಮೊಗ್ರ 29, ಕರಿಕ್ಕಳ 26, ಚೊಕ್ಕಾಡಿ, ಕೋಡಿಂಬಳ- ತೆಕ್ಕಡ್ಕ ತಲಾ 24, ಪೆರುವಾಜೆ-ಪೆಲತ್ತಡ್ಕ, ಎಣ್ಮೂರು, ಪುತ್ತೂರು ತಾಲೂಕಿನ ಬಲ್ನಾಡು ತಲಾ 20, ಮುರುಳ್ಯ- ಶೇರ 19, ಎಡಮಂಗಲ-ದೇವಜಲು 17, ಎಣ್ಮೂರು-ಅಲೆಂಗಾರ 16 ಹಾಗೂ ಕಡಬ-ಗೋಳಿತ್ತಡಿಯಲ್ಲಿ 07 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಉಳಿದಂತೆ ಕುಂಬ್ಳೆ-ಎಡನಾಡು 47, ಕಾಸರಗೋಡು-ಕಲ್ಲಕಟ್ಟ 45 ಕಾರ್ಕಳ-ಬಜಗೋಳಿ 44, ಪುತ್ತೂರು ತಾಲೂಕಿನ ಬಂಗಾರಡ್ಕ, ಮುಂಡೂರು ತಲಾ 35, ಪಾಣಾಜೆ 29 ಸರ್ವೆ, ಮಡಿಕೇರಿ- ಎಂ ಚೆಂಬು ತಲಾ 28, ಕೈರಂಗಳ 24, ಅಡೆಂಜ- ಉರುವಾಲು 22, ಕಂಪದಕೋಡಿ 18, ಕೆಲಿಂಜ 17, ಶಾಂತಿಗೋಡು 11, ಇಳಂತಿಲ- ಕೈಲಾರು 09 ಮಿ.ಮೀ.ನಷ್ಟು ಮಳೆಯಾಗಿದೆ. ನಿನ್ನೆಯದೇ ವಾತಾವರಣ ಈ ದಿನವೂ ಇರುವ ಸಾಧ್ಯತೆ ಇದೆ.
ಕೃಷಿಕರಲ್ಲಿ ಹೆಚ್ಚುತ್ತಿರುವ ಹವಾಮಾನ ಅಧ್ಯಯನದ ಆಸಕ್ತಿ-
ಮಳೆ ಅಳತೆಯ ಬಗ್ಗೆ ಕರಾವಳಿಯ ಇನ್ನಷ್ಟು ಕೃಷಿಕರು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದು, ಹೆಚ್ಚಿನ ಕಡೆಗಳಿಂದ ಇದೀಗ ಮಾಹಿತಿ ದೊರೆಯುತ್ತಿದೆ. ಮಕ್ಕಳಲ್ಲಿ ಹವಾಮಾನ ಅಧ್ಯಯನದ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆಯ ಪರಿಸರದಲ್ಲಿನ ಮಳೆ ಅಳತೆಯನ್ನು ಆರಂಭಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ದಿನ ನಿತ್ಯ ಶಾಲಾರಂಭಕ್ಕೆ ಮೊದಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಮಳೆ ಅಳತೆಯನ್ನು ದಾಖಲಿಸುತ್ತಿದ್ದಾರೆ.