ಹೊಸದಿಲ್ಲಿ: ಹರಿಯಾಣ ವಿಧಾನಸಭಾ ಚುನಾವಣೆಯು ಅಕ್ಟೋಬರ್ 1 ರ ಬದಲಾಗಿ ಅಕ್ಟೋಬರ್ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಎರಡೂ ಚುನಾವಣೆಗಳ ಎಣಿಕೆ ದಿನವನ್ನು 4 ರಿಂದ ಅಕ್ಟೋಬರ್ 8 ಕ್ಕೆ ಪರಿಷ್ಕರಿಸಲಾಗಿದೆ.ಬಿಷ್ಣೋಯ್ ಸಮುದಾಯವು
ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿರುವ ಅಸೋಜ್ ಅಮಾವಾಸ್ಯೆ ಉತ್ಸವದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುವಂತೆ ಚುನಾವಣಾ ದಿನಾಂಕವನ್ನು ಬದಲಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಈ ಬಾರಿ ಅಕ್ಟೋಬರ್ 2 ರಂದು ಅಮವಾಸ್ಯೆ ಉತ್ಸವ ನಡೆಯಲಿದೆ. ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್ನಲ್ಲಿರುವ ಸಾವಿರಾರು ಬಿಷ್ಣೋಯಿ ಸಮುದಾಯದ ಕುಟುಂಬಗಳು ಮತದಾನದ ದಿನದಂದು ರಾಜಸ್ಥಾನ ಬಿಕಾನೇರ್ ಗೆ ಪ್ರಯಾಣಿಸಲಿದ್ದು, ಇದರಿಂದ ಮತದಾನಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿತ್ತು.