ಸುಳ್ಯ: ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಬುಧವಾರ ಸುಳ್ಯಕ್ಕೆ ಭೇಟಿ ನೀಡಿದರು. ವೇಣೂರು ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ 19ರಿಂದ 27ರತನಕ ನಡೆಯಲಿದೆ.ಆ ಪ್ರಯುಕ್ತ ಸುಳ್ಯದ ಪ್ರಮುಖರನ್ನು ಆಹ್ವಾನಿಸಲು ಅವರು ಆಗಮಿಸಿದ್ದರು. ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ
ಸಭೆಯಲ್ಲಿ ಮಾತನಾಡಿದ ಅವರು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದರು. ಹೊರೆ ಕಾಣಿಕೆ ಸಮರ್ಪಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಶಾಸಕ ಹರೀಶ್ ಪೊಂಜಾ, ವೇಣೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜನಾರ್ದನ ಹೆಗ್ಡೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ,ಕೃಪಾಶಂಕರ ತುದಿಯಡ್ಕ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನ.ಪಂ.ಸದಸ್ಯ ಬೂಡು ರಾಧಾಕೃಷ್ಣ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ಬೂಡುಪನ್ನೆ, ಜಗದೀಶ್ ಸರಳೀಕುಂಜ, ಜಿನ್ನಪ್ಪ ಪೂಜಾರಿ, ಹರೀಶ್ ರೈ ಉಬರಡ್ಕ, ಮಹೇಶ್ ರೈ ಮೇನಾಲ, ವರ್ಷಿತ್ ಚೊಕ್ಕಾಡಿ, ರೂಪೇಶ್, ಪ್ರಕಾಶ್ ಯಾದವ್, ನವೀನ್ ಎಲಿಮಲೆ, ನ.ಪಂ. ಸದಸ್ಯರಾದ ಪೋಜಿತಾ, ಸುಧಾಕರ್ ಕುರುಂಜಿ ಭಾಗ್, ಉಪಸ್ಥಿತರಿದ್ದರು