ಸುಳ್ಯ:ಬೆಳ್ತಂಗಡಿಯ ಜನಪ್ರಿಯ ಶಾಸಕ ಅವರ ಆಕರ್ಷಕ ವರ್ಣಮಯ ಭಾವಚಿತ್ರವನ್ನು ಸುಳ್ಯದ ಕಲಾವಿದೆ ಪೂಜಾ ಬೋರ್ಕರ್ ಬೆಟ್ಟಂಪಾಡಿ ಬಿಡಿಸಿ ನೀಡಿದ್ದಾರೆ.ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸುಳ್ಯದ ಪ್ರಮುಖರನ್ನು

ಆಹ್ವಾನಿಸಲು ಫೆ.15ರಂದು ಹರೀಶ್ ಪೂಂಜಾ ಅವರು ಸುಳ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಪೂಜಾ ತಾನು ಬಿಡಿಸಿದ ಪೆನ್ಸಿಲ್ ಆರ್ಟ್ ಚಿತ್ರ ಹಾಗು ವರ್ಣಮಯ ಚಿತ್ರವನ್ನು ಪೂಂಜಾ ಅವರಿಗೆ ನೀಡಿದರು.ಚಿತ್ರಕ್ಕೆ ಹರೀಶ್ ಪೂಂಜಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಪೂಜಾ ಬೆಟ್ಟಂಪಾಡಿ ಅವರ ಸಹೋದರ ನವನೀತ್ ಬೆಟ್ಟಂಪಾಡಿ, ಪ್ರಮುಖರಾದ
ಹರೀಶ್ ಬೂಡುಪನ್ನೆ , ಅಶೋಕ್ ಅಡ್ಕಾರ್, ರೋಶನ್ ಪ್ರಭು ಜಯನಗರ, ಜನಾರ್ದನ ಹೆಗ್ಡೆ ಉಪಸ್ಥಿತರಿದ್ದರು