ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹರೀಶ್ ಪೂಂಜ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.ವಿಚಾರಣೆಗಾಗಿ
ಪೊಲೀಸರು ಇಂದು ಶಾಸಕರ ಮನೆಗೆ ತೆರಳಿದ್ದರು. ದಿನಪೂರ್ತಿ ನಡೆದ ಹೈಡ್ರಾಮಾದ ಬಳಿಕ ಬಳಿಕ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿ ತೆರಳಿದ್ದರು. ಬಳಿಕ ರಾತ್ರಿಯ ವೇಳೆಗೆ ಪೂಂಜಾ ಠಾಣೆಗೆ ಹಾಜರಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತಿದೆ ಎಂದು ತಿಳಿದು ಬಂದಿದೆ.