ಸುಳ್ಯ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸುಳ್ಯ ಉಪ ವಿಭಾಗದ ವತಿಯಿಂದ ಮೇ.31ರಂದು ನಿವೃತ್ತರಾಗಲಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಹನುಮಂತರಾಯಪ್ಪ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯದ ಬಂಟರ ಭವನದಲ್ಲಿ ನಡೆಯಿತು. 39 ವರ್ಷಗಳ ಸರಕಾರಿ ಸೇವೆಯಿಂದ ನಿವೃತ್ತರಾಗಲಿರುವ ಹನುಮಂತರಾಯಪ್ಪ ಅವರನ್ನು ಇಲಾಖೆಯ ಇಂಜಿನಿಯರ್ಗಳು, ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಸೇರಿ ಆತ್ಮೀಯವಾಗಿ ಸನ್ಮಾನಿಸಿ
ಬೀಳ್ಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹನುಮಂತರಾಯಪ್ಪ ಅವರು ‘ ಸುಳ್ಯದ ಜನತೆ ನೀಡಿದ ಪ್ರೀತಿ, ವಿಶ್ವಾಸ ಎಂದೂ ಮರೆಯಲು ಸಾಧ್ಯವಿಲ್ಲ. ಸುಳ್ಯದ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿ ಎಂದು ಹೇಳಿದರು. ಸೇವಾ ಅವಧಿಯ ದೊಡ್ಡ ಅವಧಿಯನ್ನು ಸುಳ್ಯದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿರುವುದು ಸಂತೃಪ್ತಿ ನೀಡಿದೆ ಎಂದು ಅವರು ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಂದರಯ್ಯ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್, ಉಪಕಾರ್ಯದರ್ಶಿ ಆನಂದ್ ಕುಮಾರ್,ಯೋಜನಾ ನಿರ್ದೇಶಕ ಜಯರಾಮ, ನಿವೃತ್ತ ಅಧಿಕಾರಿ
ಜಯರಾಮಯ್ಯ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸರಾದ ಡಾ. ಚಂದ್ರಶೇಖರ, ಇಂಜಿನಿಯರ್ ಸಂಗಪ್ಪಯ್ಯ ಹುಕ್ಕೇರಿ,
ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ರಾಜೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ಗಳಾದ ಜನಾರ್ಧನ, ಮಣಿಕಂಠ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ ಹರೀಶ್ ರೈ ಉಬರಡ್ಕ, ಶೈಲೇಶ್ ಅಂಬೆಕಲ್ಲು, ಕರುಣಾಕರ ರೈ
ಚಂದ್ರಶೇಖರ ಪನ್ನೆ, ನೇಮಿರಾಜ್ ಮತ್ತಿತರರು ಶುಭ ಹಾರೈಸಿದರು.ಗಿರೀಶ್ ನಾರ್ಕೋಡು ವಂದಿಸಿದರು. ನವನೀತ್ ರೈ ಕಾರ್ಯಕ್ರಮ ನಿರೂಪಿಸಿದರು.