ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ಸಂಘದ ವತಿಯಿಂದ ಬುಧವಾರ ನಿವೃತ್ತರಾದ ದೇವಳದ ಸಿಬ್ಬಂದಿ ಹಾಲವ್ವ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಆಡಳಿತ ಕಚೇರಿ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು ಹಾಲವ್ವ ಅವರನ್ನು ಕಾರ್ಯನಿರ್ವಹಣಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.ಈ ಸಂದರ್ಭ ವೇದಿಕೆಯಲ್ಲಿ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸುಧಾಕರ ಎಸ್.ಕೆ, ರಾಜಲಕ್ಷ್ಮಿ ಶೆಟ್ಟಿಗಾರ್, ಪುರುಷೋತ್ತಮ್ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ದೇವಳದ ಸಿಬ್ಬಂಧಿ ಯೋಗೀಶ್ ಸ್ವಾಗತಿಸಿದರು.ಸುಜಾತಾ ಮತ್ತು ಅರ್ಪಿತಾ ಪ್ರಾರ್ಥನೆ ಹಾಡಿದರು.ಮಹೇಶ್ ಕುಮಾರ್ ಎಸ್ ಪರಿಚಯಿಸಿದರು.ರಾಜಲಕ್ಷ್ಮಿ ಶೆಟ್ಟಿಗಾರ್ ವಂದಿಸಿದರು.