ಸುಳ್ಯ: ಸುಳ್ಯದಲ್ಲಿ ಸುರಿದ ಭರ್ಜರಿ ಮಳೆಗೆ ಸುಳ್ಯ ನಗರದ ಹಳೆಗೇಟಿನಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಹೊಳೆಯಂತಾಗಿದೆ. ಮಳೆ ನೀರು ಹರಿಯಲು ಚರಂಡಿ ಇಲ್ಲದೆ ವಿವಿಧೆಡೆಯಿಂದ ಹರಿದು ಬಂದ ನೀರು ರಸ್ತೆಯಲ್ಲಿಯೇ ಶೇಖರಣೆಯಾಗಿದೆ. ವಾಹನಗಳು ಕೆಸರು ನೀರಿನಲ್ಲಿ
ತೋಯ್ದುಕೊಂಡು ಸಂಚರಿಸುತಿದೆ.ಕಾರು, ಬೈಕ್ ಸೇರಿದಂತೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ ಆಗುತ್ತಿದೆ ಪಾದಾಚಾರಿಗಳ ಮೇಲೆ, ರಸ್ತೆ ಬದಿಯಲ್ಲಿ ಕೆಸರು ನೀರಿನ ಸಿಂಚನ ಆಗುತಿದೆ.
ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಹಲವು ವರ್ಷಗಳಿಂದ ಮಳೆ ಬಂದ ಕೂಡಲೇ ಕಾಣಿಸಿಕೊಳ್ಳುವ ದೊಡ್ಡ ಸಮಸ್ಯೆ ಹಳೆಗೇಟಿನಲ್ಲಿ ರಸ್ತೆ ತುಂಬಾ ತುಂಬಿಕೊಳ್ಳುವ ಮಳೆಯ ನೀರು. ಜೋರು ಮಳೆ ಬಂದರೆ ರಸ್ತೆ ಪೂರ್ತಿ ನೀರು ತುಂಬಿ ರಾಷ್ಟ್ರೀಯ ಹೆದ್ದಾರಿ ಹೊಳೆಯಾಗಿ ಮಾರ್ಪಾಡಾಗುತ್ತದೆ.