ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗ ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನಕ್ಕೆ ಖಂಡನೆ ಹಾಗೂ ಹಕ್ಕೊತ್ತಾಯ ಸಭೆ ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ
ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಅವಹೇಳನ ಅಪಪ್ರಚಾರ ನಡೆದಾಗ ನಾವು ಮೂಕ ಪ್ರೇಕ್ಷಕರಾಗಬಾರದು. ನಮ್ಮ ಶ್ರದ್ಧಾ ಕೇಂದ್ರಗಳ ಬಗ್ಗೆ ಅವಹೇಳನ ಆದರೆ ಅದರ ವಿರುದ್ಧ ಪ್ರತಿಭಟಿಸುವುದು ನಮ್ಮಕರ್ತವ್ಯ ಎಂದು ಅವರು ಹೇಳಿದರು.
ಎಂ.ಬಿ.ಫೌಂಢೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ, ಧಾರ್ಮಿಕ ಮುಖಂಡ ರಾಜೇಶ್ ಶೆಟ್ಟಿ ಮೇನಾಲ ಮುಖ್ಯ ಭಾಷಣ ಮಾಡಿದರು. ಜನಜಾಗೃತಿ
ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಶಾರದಾಂಬಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್,
ಚೆನ್ನಕೇಶ ದೇಚಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಬಳಗದ ಕಾರ್ಯದರ್ಶಿ ಅಶೋಕ್ ಪ್ರಭು, ಸಂಚಾಲಕ
ಎಂ.ವೆಂಕಪ್ಪ ಗೌಡ, ಕೋಶಾಧಿಕಾರಿ ನಾರಾಯಣ ಕೇಕಡ್ಕ, ವಿವಿಧ ಕ್ಷೇತ್ರಗಳ, ಭಜನಾ ಮಂದಿರಗಳ ಸಂಘ ಸಂಸ್ಥೆಗಳ ಪ್ರಮುಖರಾದ ಎಸ್.ಎನ್.ಮನ್ಮಥ, ಪಿ.ಸಿ.ಜಯರಾಮ, ವೆಂಕಟ್ ವಳಲಂಬೆ, ಲೋಕನಾಥ ಅಮೆಚೂರ್, ಬಿ.ನಾಗಕುಮಾರ್ ಶೆಟ್ಟಿ, ಪಿ.ಕೆ.ಉಮೇಶ್, ವಿಷ್ಣುಕಿರಣ್ ಭಟ್, ದೀಪಕ್ ಕುತ್ತಮೊಟ್ಟೆ ಮಧುಸೂದನ್ ಕೆ., ಕೇಶವ ಕೊಳಲುಮೂಲೆ, ಗಿರಿಧರ ಸ್ಕಂದ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಮಲ್ಲೇಶ್ ಬೆಟ್ಟಂಪಾಡಿ, ಎ.ಕೆ. ಮಣಿಯಾಣಿ, ಐತ್ತಪ್ಪ ರೈ ಅಜ್ಜಂಗಳ ಉಪಸ್ಥಿತರಿದ್ದರು.





