ಸುಳ್ಯ:ಸುಳ್ಯ ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ಭಕ್ತಿ ಸಂಭ್ರಮದಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ ವಿಶೇಷತೆ. ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಪ್ರತಿ ಜ.31ರಂದು ವಾರ್ಷಿಕ ಉತ್ಸವ

ವಿಜ್ರಂಭಣೆಯಿಂದ ನಡೆಯುತ್ತದೆ. ದೈವಜ್ಞರಾದ ಕಾರ್ಕಳ ಕೊಂಡೆಜಾಲು ಶ್ರೀ ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ಗರ್ಭಗುಡಿಯ ಬಾಗಿಲು ತೆರೆದು ವಿಶೇಷ ಪೂಜೆಗಳು ನಡೆಯಿತು. ಇಂದು ಬೆಳಗ್ಗೆ ಗಂಟೆ 8ರಿಂದ ಸ್ವಸ್ತಿ ಪುಣ್ಯಾಹವಾಚನೆ,
ನಿರ್ಮಾಲ್ಯ ವಿಸರ್ಜನೆ, ಜಾತ ವೇದಸೆ ಮಂತ್ರ ಹೋಮ ಸಪ್ತಸತಿ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ 12ಕ್ಕೆ ದೈವ ದೇವರ ಆರಾಧನೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಾವಿರಾರು ಮಂದಿ ಉತ್ಸವದಲ್ಲಿ ಭಾಗವಹಿಸಿ ಗುತ್ಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಧರ್ಮದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ ಅವರು ಆಗಮಿಸಿದ ಪ್ರತಿಯೊಬ್ಬರನ್ನೂ ಸ್ವಾಗತಿಸಿದರು.
ಡಾ.ಜ್ಯೋತಿ ಆರ್ ಪ್ರಸಾದ್, ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್, ಎಒಎಲ್ಇ ಬಿ ಕಮಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ, ದಿನೇಶ್ ಮಡ್ತಿಲ,ಡಾ.ಮನೋಜ್ ಅಡ್ಡಂತ್ತಡ್ಕ,ಅರುಣ್ ಕುರುಂಜಿ, ಯಶೋದಾ ರಾಮಚಂದ್ರ, ಡಾ.ಮೋಕ್ಷಾ ನಾಯಕ್,
ಚಿದಾನಂದ ಬಾಳಿಲ, ಕಮಲಾಕ್ಷ ನಂಗಾರು

ಶಾಸಕಿ ಭಾಗೀರಥಿ ಮುರುಳ್ಯ, ಕೆವೆಂಪು ವಿವಿ ನಿವೃತ್ತ ಉಪಕುಲಪತಿ ಡಾ.ಚಿದಾನಂದ ಕೊಳಂಬೆ, ಪ್ರಮುಖರಾದ ಎನ್.ಎ.ರಾಮಚಂದ್ರ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಎಂ.ಬಿ.ಸದಾಶಿವ, ಹರೀಶ್ ಕಂಜಿಪಿಲಿ,ಪಿ.ಸಿ.ಜಯರಾಮ, ವಿನಯಕುಮಾರ್ ಕಂದಡ್ಕ,ಸುನಿಲ್ ಕೇರ್ಪಳ, ವೆಂಕಟ್ ದಂಬೆಕೋಡಿ, ಪಿ.ಎಸ್.ಗಂಗಾಧರ, ಜಯಪ್ರಕಾಶ್ ಕುಂಚಡ್ಕ, ಸಂತೋಷ್ ಕುತ್ತಮೊಟ್ಟೆ, ಪದ್ಮಾ ಕೋಲ್ಚಾರ್, ಪುರೋಹಿತ ನಾಗರಾಜ ಭಟ್ ಮತ್ತಿತರರು ಸೇರಿ ಸಾವಿರಾರು ಮಂದಿ ಉಪಸ್ಥಿತರಿದ್ದರು.











