ಸುಳ್ಯ:ಸುಳ್ಯ ಕಾಂತಮಂಗಲ ಕುರುಂಜಿಯ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಜ.31ರಂದು ಭಕ್ತಿ ಸಂಭ್ರಮದಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಉತ್ಸವದ ಅಂಗವಾಗಿ ಜ.31 ರಂದು ಕ್ಷೇತ್ರದ ಗರ್ಭಗುಡಿ ತೆರೆದು ವಿಶೇಷ ಪೂಜೆ ನೆರವೇರಿತು. ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವುದು ಈ ಕ್ಷೇತ್ರದ
ವಿಶೇಷತೆ. ಡಾ.ರೇಣುಕಾಪ್ರಸಾದ್ ಕೆ.ವಿ. ಧರ್ಮದರ್ಶಿಗಳಾಗಿರುವ ಕ್ಷೇತ್ರದಲ್ಲಿ ಪ್ರತಿ ಜ.31ರಂದು ವಾರ್ಷಿಕ ಉತ್ಸವ
ವಿಜ್ರಂಭಣೆಯಿಂದ ನಡೆಯುತ್ತದೆ. ದೈವಜ್ಞರಾದ ಕಾರ್ಕಳ ಕೊಂಡೆಜಾಲು ಶ್ರೀ ಸೀತಾರಾಮ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ಗರ್ಭಗುಡಿಯ ಬಾಗಿಲು ತೆರೆದು ವಿಶೇಷ ಪೂಜೆಗಳು ನಡೆಯಿತು. ಇಂದು ಬೆಳಗ್ಗೆ

ಗಂಟೆ 8ರಿಂದ ಸ್ವಸ್ತಿ ಪುಣ್ಯಾಹವಾಚನೆ, ನವಗ್ರಹ ಹೋಮ ಮತ್ತು ಚಂಡಿಕಾ ಹೋಮ ನಡೆದು 11.30ಕ್ಕೆ ಸರಿಯಾಗಿ ಪೂರ್ಣಾಹುತಿ ನಂತರ ದೇವರಿಗೆ ಕಲಶಾಭಿಷೇಕ ಪರಿವಾರ ಪೂಜೆ, ಪ್ರಸನ್ನ ಪೂಜೆ ಸಂಪನ್ನಗೊಂಡು ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಅನ್ನಸಂತರ್ಪಣೆ ಸ್ವೀಕರಿಸಿದರು.
ಸಾವಿರಾರು ಮಂದಿ ಉತ್ಸವದಲ್ಲಿ ಭಾಗವಹಿಸಿ ಗುತ್ಯಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕ್ಷೇತ್ರದ ಧರ್ಮದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ ಅವರು ಆಗಮಿಸಿದ ಪ್ರತಿಯೊಬ್ಬರನ್ನೂ ಸ್ವಾಗತಿಸಿ, ಪ್ರಸಾದ ನೀಡಿ
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಶೋಭಾ ಚಿದಾನಂದ, ಸೇರಿದಂತೆ ನೂರಾರು ಮಂದಿ ಪ್ರಮುಖರು ಸೇರಿ ಸಾವಿರಾರು ಮಂದಿ ದರ್ಶನ ಪಡೆದರು.

ಡಾ.ಜ್ಯೋತಿ ಆರ್ ಪ್ರಸಾದ್, ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಆರ್.ಪ್ರಸಾದ್, ಎಒಎಲ್ಇ ಬಿ ಕಮಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ, ದಿನೇಶ್ ಮಡ್ತಿಲ,ಡಾ.ಮನೋಜ್ ಅಡ್ಡಂತ್ತಡ್ಕ,ಅರುಣ್ ಕುರುಂಜಿ, ಯಶೋದಾ ರಾಮಚಂದ್ರ, ಡಾ.ಮೋಕ್ಷಾ ನಾಯಕ್,
ಚಿದಾನಂದ ಬಾಳಿಲ, ಕಮಲಾಕ್ಷ ನಂಗಾರು, ಪ್ರಮುಖರಾದ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ, ಪಿ.ಸಿ.ಜಯರಾಮ, ಡಾ.ಲೀಲಾಧರ ಡಿ.ವಿ, ಚಂದ್ರಶೇಖರ ಪೇರಾಲು, ಜಾಕೆ ಮಾಧವ ಗೌಡ, ಎಂ.ಬಿ.ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.
