ಸುಳ್ಯ:ಗುತ್ತಿಗಾರು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಡಿ.16ರಂದು ಸಂಜೆ 3 ಗಂಟೆಗೆ ಗುತ್ತಿಗಾರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ
ಪ್ರವೀಣ್ ಮುಂಡೋಡಿ ಹಾಗೂ ಚಂದ್ರಶೇಖರ ಬಾಳುಗೋಡು ಮಾತನಾಡಿ ‘ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮಣ್ಣ ಶೆಟ್ಟಿ, ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ವಿಜೇಶ್ ಹಿರಿಯಡ್ಕ, ಭರತ್ ಕನ್ನಡ್ಕ, ರಾಘವ ಗೌಡ ಆರ್ನೋಜಿ, ದುಷ್ಯಂತ್ ಶೀರಡ್ಕ, ಅರುಣ್ ತಿಪ್ಪನ್ನೂರ್, ಹರೀಶ್ ಎನ್.ಎಂ, ನೀಲಪ್ಪ ಪೈಕ, ಉಮೇಶ್ ಕಾಂತಿಲ ಉಪಸ್ಥಿತರಿದ್ದರು.