ಮಂಡ್ಯ: ಮಂಡ್ಯದ ಗುರುದೇವ ಲಲಿತ ಕಲಾ ಅಕಾಡೆಮಿಯ ವತಿಯಿಂದ ಭರತನಾಟ್ಯ ಪಯಣಾನುಭವದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಯಿತು. ಅಕಾಡೆಮಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಮೇಘ ಸಂದೇಶ ಭರತನಾಟ್ಯ ಪಯಣಾನುಭವದ ಪ್ರೇರಣಾ ಉಪನ್ಯಾಸ, ನೃತ್ಯ ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರವನ್ನು

ಅಕಾಡೆಮಿಯ ನಿರ್ದೇಶಕಿ ನಾಟ್ಯ ವಿದುಷಿ ಡಾ.ಚೇತನಾ ರಾಧಾಕೃಷ್ಣ ಪಿ.ಎಂ. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುರುದೇವ ಲಲಿತ ಕಲಾ ಅಕಾಡಮಿಯಿಂದ ಮೇಘ ಸಂದೇಶ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಅಕಾಡೆಮಿಯಿಂದ ಕಲಿತು ಹೋದಂತಹ ಹಿರಿಯ ಕಲಾವಿದರನ್ನು ಕರೆದು ಅವರಿಂದ ಉಪನ್ಯಾಸ, ನಾಟ್ಯ ಮಾಡಿಸಿ, ಪುಟ್ಟ ಮಕ್ಕಳಿಗೆ ಪ್ರೇರಣೆ ನೀಡಲು ಕಾರ್ಯಕ್ರಮ ರೂಪಿಸಲಾಗಿದ್ದು, ಅದರಂತೆ ಮೊದಲನೇ ಭಾರಿಗೆ ನಾಟ್ಯ ವಿದುಷಿ ಮೇಘ.ಪಿ. ರಾವ್ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಹೇಳಿದರು.
ಧಿರನ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಯು.ಎಸ್.ಎ. ನಿರ್ದೇಶಕಿ ನಾಟ್ಯ ವಿದುಷಿ ಮೇಘ.ಪಿ.ರಾವ್.(ಮೇಘ ಕಕ್ಕಿಲ್ಲಾಯ) ಕಾರ್ಯಾಗಾರ ನಡೆಸಿಕೊಟ್ಟರು. ಅಕಾಡೆಮಿಯ ನಿರ್ದೇಶಕ ಪಿ.ಎಂ.ರಾಧಕೃಷ್ಣ ಹಾಗೂ ಭರತ ನಾಟ್ಯ ಕಲಾವಿದರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.