ಸುಳ್ಯ: ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾರಾಯಣ ಗುರುಗಳು ಇಡೀ ವಿಶ್ವಕ್ಕೆ
ಮಾನವತವಾದವನ್ನು ಸಾರಿದವರು ಅವರ ಆದರ್ಶಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸೂಡ ಅಧ್ಯಕ್ಷ ಮುಸ್ತಫ ಕೆ.ಎಂ. ಮಾತನಾಡಿ ಇಡೀ ಜಗತ್ತಿಗೆ ಶಾಂತಿಯ ಮಂತ್ರವನ್ನು ಸಾರಿದವರು ನಾರಾಯಣ ಗುರುಗಳು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಅವರು ಕೇರಳದಲ್ಲಿ ಜನಿಸಿ ವಿಶ್ವಕ್ಕೆ ಮಾನವತವಾದದ ಜೊತೆಗೆ ಅವರ ಅನುಯಾಯಿಗಳಾಗಿ ಪ್ರೀತಿ ವಾತ್ಸಲ್ಯದಿಂದ ಬಾಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ತಹಶೀಲ್ದಾರ್ ಮಂಜುಳ ಎಂ ,ಬ್ರಹ್ಮಶ್ರಿ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣಕುಮಾರ್.ಎ ಅಲೆಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪ ತಹಶೀಲ್ದಾರ್ ಚಂದ್ರಶೇಖರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಬ್ರಹ್ಮಶ್ರಿ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ನವೀನ್ ಸಾರಕೆರೆ ವಂದಿಸಿದರು.












