ಯುಎಈ: ಸುಳ್ಯ ತಾಲೂಕಿನ ಎಲಿಮಲೆ ಜಮಾಅತ್ತಿಗೊಳಪಟ್ಟ ಗಲ್ಫ್ ನಲ್ಲಿ ದುಡಿಯುತ್ತಿರುವ ಅನಿವಾಸಿ ಮಿತ್ರರ ಜಿಸಿಸಿ ಎಲಿಮಲೆ ಗಲ್ಫ್ ಕಮಿಟಿ ಅಸ್ತಿತ್ವಕ್ಕೆ ಬಂದಿದೆ.ಆನ್ಲೈನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದೀಕ್ ಅಮ್ಜದಿ ದುವಾಕ್ಕೆ ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಬಶೀರ್ ಗೂಡಂಗಡಿ ನೆರವೇರಿಸಿದರು. ಜಲೀಲ್ ಗೂಡಂಗಡಿ ಸಲಹೆಯನ್ನು ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ನೂತನ
ಸಮಿತಿ ರಚಿಸಲಾಯಿತು. ಸಲಹೆಗಾರರಾಗಿ ಹಸೈನಾರ್ ಗೂಡಂಗಡಿ ಒಮಾನ್ ಹಾಗೂ ಸಿದ್ದೀಕ್ ಅಮ್ಜದಿ ಅಬುದಾಬಿ ಇವರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಅಶ್ರಫ್ ಜೀರ್ಮುಕ್ಕಿ ಸೌದಿ, ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ದೊಡ್ಡಂಗಡಿ ಕತಾರ್, ಕೋಶಾಧಿಕಾರಿಯಾಗಿ ಬಶೀರ್ ಗೂಡಂಗಡಿ ಯುಎಈ, ಜೊತೆ ಕಾರ್ಯದರ್ಶಿಗಳಾಗಿ ಇಲ್ಯಾಸ್ ಅತ್ತಿಮಾರಡ್ಕ ಯುಎಈ, ಫೈಸಲ್ ಜೀರ್ಮುಕ್ಕಿ ಮಲೇಶಿಯಾ, ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿ ಶಫೀಕ್(KSM) ಒಮಾನ್ ಹಾಗೂ ಕೌನ್ಸಿಲರ್ ಗಳಾಗಿ ಇರ್ಷಾದ್ ತಳೂರು ಸೌದಿ, ರಫೀಕ್ ಜೀರ್ಮುಕ್ಕಿ ಸೌದಿ, ಇಸ್ಮಾಈಲ್ ಜೀರ್ಮುಕ್ಕಿ ಕುವೈಟ್, ಸಫ್ವಾನ್ ದೊಡ್ಡಂಗಡಿ ಯುಎಈ, ಆಸಿಫ್ ಪಳ್ಳಿಕ್ಕಲ್ ಕುವೈಟ್, ಆಬಿದ್ ಜೀರ್ಮುಕ್ಕಿ ಒಮಾನ್, ರಶೀದ್ ಎಲಿಮಲೆ ಒಮಾನ್, ಮುನೀರ್ ಜೀರ್ಮುಕ್ಕಿ ಸೌದಿ, ನವಾಝ್ ಮೆತ್ತಡ್ಕ ಯುಎಈ ಇವರುಗಳನ್ನು ಆರಿಸಲಾಯಿತು.
ಕಾರ್ಯಕ್ರಮವನ್ನು ಇಲ್ಯಾಸ್ ಅತ್ತಿಮಾರಡ್ಕ ಸ್ವಾಗತಿಸಿ, ನೂತನ ಕಾರ್ಯದರ್ಶಿ ನೌಷಾದ್ ದೊಡ್ಡಂಗಡಿ ವಂದಿಸಿದರು.