ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲುಪಿಎಲ್ನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 11 ರನ್ ಅಂತರದಿಂದ ಸೋತಿದೆ. ಗೆಲ್ಲಲು 202 ಗುರಿ ಪಡೆದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ. ಆರ್ಸಿಬಿ ಪರ ಸೋಫಿ ಡಿವೈನ್ 45 ಎಸೆತದಲ್ಲಿ 66 ಸಿಡಿಸಿ
ಹೋರಾಟ ನಡೆಸಿದರೂ ಗೆಲುವಿನ ದಡ ಸೇರಲಾಗಲಿಲ್ಲ.
ಎಲ್ಲಿಸ್ ಪೆರ್ರಿ 32, ಹೀದರ್ ನೈಟ್ ಔಟಾಗದೆ 30 ರನ್ ಗಳಿಸಿದರು.
ಬೌಲಿಂಗ್ ವಿಭಾಗದಲ್ಲಿ ಅಶ್ಲೆ ಗಾರ್ಡನರ್(3-31)ಹಾಗೂ ಸದರ್ಲ್ಯಾಂಡ್(2-56)ಐದು ವಿಕೆಟ್ ಹಂಚಿಕೊಂಡರು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 201 ರನ್ ಗಳಿಸಿತು.
ಹರ್ಲೀನ್ ಡಿಯೊಲ್(67 ರನ್, 45 ಎಸೆತ ) ಹಾಗೂ ಸೋಫಿಯಾ ಡಂಕ್ಲಿ(65 ರನ್, 28 ಎಸೆತ)ಅರ್ಧಶತಕಗಳ ಕೊಡುಗೆ ಸಹಾಯದಿಂದ ಗುಜರಾತ್ ಜೈಂಟ್ಸ್ 201 ರನ್ ಕಲೆ ಹಾಕಿದರು.ಡಂಕ್ಲಿ ಕೇವಲ 18 ಎಸೆತಗಳಲ್ಲಿ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದರು. ಒಂದೇ ಓವರ್ನಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ ಗಳಿಸಿ ಅರ್ಧಶತಕ ಪೂರೈಸಿದರು.