ಸುಳ್ಯ:ಕರ್ನಾಟಕ ಸರಕಾರ ಘೋಷಣೆ ಮಾಡಿ ಅನುಷ್ಠಾನ ಮಾಡುತ್ತಿರುವ ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಫಲಾನುಭವಿಗಳಿಗೆ 18 ತಿಂಗಳಲ್ಲಿ 180 ಕೋಟಿ ರೂ ಬಂದಿದೆ ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೃಹ ಲಕ್ಮ್ಮಿ ಯೋಜನೆಯಲ್ಲಿ
26,228 ಫಲಾನುಭವಿಗಳಿಗೆ 83,14,64,000 ರೂ ಬಂದಿದೆ. ಶಕ್ತಿ ಯೋಜನೆಯಲ್ಲಿ 7,66,16,785 ಫಲಾನುಭವಿಗಳಿಗೆ 33,69,14,386 ರೂಗಳ ಪ್ರಯೋಜನ ಸಿಕ್ಕಿದೆ, ಅನ್ನಭಾಗ್ಯ ಯೋಜನೆಯಲ್ಲಿ 17,536 ಫಲಾನುಭವಿಗಳಿಗೆ ರೂ 20,10,13,100 ಬಂದಿದೆ. ಯುವನಿಧಿಯಲ್ಲಿ 289 ಫಲಾನುಭವಿಗಳಿಗೆ 50,34,000 ರೂ ಬಂದಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 36,900 ಫಲಾನುಭವಿಗಳಿಗೆ 43 ಕೊಟಿ ಬಂದಿದೆ ಎಂದು ವಿವರಿಸಿದರು.ತಾಲೂಕಿನಲ್ಲಿ ಶೇ.95 ಮಂದಿ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಸುಳ್ಯ ತಾಲೂಕಿನ ಗ್ರಾಮೀಣ ಭಾಗಕ್ಕೆ ಬಸ್ಗಳ ಕೊರತೆಯನ್ನು ನೀಗಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಬಸ್ ಸಮಸ್ಯೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಬೇಡಿಕೆ ಇಟ್ಟಿದ್ದರೂ ಸಭೆ ನಡೆದಿಲ್ಲ ಎಂದ ಅವರು 110 ಕೆವಿ ಕಾಮಗಾರಿ ಕೂಡಲೇ ಪೂರ್ತಿ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ ಮಾತನಾಡಿ ‘ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ತಾಲೂಕಿನ 25 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರ್ಜಿ ವಿಲೇವಾರಿ ಶಿಬಿರ ನಡೆಸಿ ಹಲವು ಮಂದಿಯ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಿಜೇಶ್ ಹಿರಿಯಡ್ಕ, ಮಣಿಕಂಠ ಕೊಳಗೆ, ಧನುಷ್ ಕುಕ್ಕೇಟಿ, ಜ್ಞಾನಶೀಲನ್ ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ಲತೀಫ್ ಅಡ್ಕಾರ್, ಕಾಂತಿ ಮೋಹನ್, ಭವಾನಿ ಬೊಮ್ಮೆಟ್ಟಿ,ರವಿ ಗುಂಡಡ್ಕ ಇದ್ದರು.