ಹೈದರಾಬಾದ್: ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (17ಕ್ಕೆ 4 ವಿಕೆಟ್) ಮಾರಕ ದಾಳಿ, ನಾಯಕ ಶುಭ್ಮನ್ ಗಿಲ್, ವಾಷಿಂಗ್ಟನ್ ಸುಂದರ್, ಶೆರ್ಫೇನ್ ರುದರ್ಫೋಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಗುಜರಾತ್ ಟೈಟನ್ಸ್ ಐಪಿಎಲ್ನಲ್ಲಿ
3ನೇ ಜಯ ದಾಖಲಿಸಿತು. ಎಸ್ಆರ್ಎಚ್ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 152 ರನ್ಗಳ ಸಾಧಾರಣ ಮೊತ್ತ ಪೇರಿಸಿತು.ಗುರಿ ಬೆನ್ನಟ್ಟಿದ ಗುಜರಾತ್ 16.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶುಭ್ಮನ್ ಗಿಲ್ 43 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಶೆರ್ಪೇನ್ ರುದರ್ಫೋರ್ಡ್ ಕೇವಲ
16 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಬಿರುಸಿನ 35 ರನ್ ಸಿಡಿಸಿದರು.ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಪರ ಹೊಡೆಬಡಿಯ ದಾಂಡಿಗರಾದ ಅಭಿಷೇಕ್ ಶರ್ಮಾ (18), ಟ್ರಾವಿಸ್ ಹೆಡ್ (8), ಇಶಾನ್ ಕಿಶಾನ್ (17) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.ನಿತೀಶ್ ಕುಮಾರ್ ರೆಡ್ಡಿ (31) ಹಾಗೂ ಹೆನ್ರಿಚ್ ಕ್ಲಾಸೆನ್ (27) ಅಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಕೊನೆಯಲ್ಲಿ ಅನಿಕೇತ್ ವರ್ಮಾ 18 ಹಾಗೂ ನಾಯಕ ಪ್ಯಾಟ್ ಕಮಿನ್ಸ್ ಅಜೇಯ 22 (9 ಎಸೆತ) ರನ್ ಗಳಿಸಿದರು.ಗುಜರಾತ್ ಪರ ನಿಖರ ದಾಳಿ ಸಂಘಟಿಸಿದ ಮಹಮ್ಮಸ್ ಸಿರಾಜ್, ಕೇವಲ 17 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಪ್ರಸಿದ್ಧ ಕೃಷ್ಣ ಹಾಗೂ ಸಾಯ್ ಕಿಶೋರ್ ತಲಾ ಎರಡು ವಿಕೆಟ್ ಕಬಳಿಸಿದರು.ಇದರೊಂದಿಗೆ ಐಪಿಎಲ್ನಲ್ಲಿ ಸಿರಾಜ್ 100 ವಿಕೆಟ್ಗಳ ಸಾಧನೆ ಮಾಡಿದರು.