ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 58 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ.ಟಾಸ್ ಗೆದ್ದು ರಾಜಸ್ಥಾನ ರಾಯಲ್ಸ್ನ ಮೊದಲು ಬೌಲಿಂಗ್ ಆಯ್ದುಕೊಂಡಿತು. ಆದರೆ ಗುಜರಾತ್ ಟೈಟನ್ಸ್ನ ಬ್ಯಾಟರಗಳ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಬೌಲರ್ಗಳು ವಿಫಲರಾದರು. ಇದರಿಂದಾಗಿ
ನಿಗದಿತ 20 ಓವರ್ಗಳಲ್ಲಿ ಟೈಟನ್ಸ್ ತಂಡವು 6 ವಿಕೆಟ್ ನಷ್ಟಕ್ಕೆ 217 ರನ್ ಪೇರಿಸಿತು.ವ218 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಯಲ್ಸ್ ತಂಡವು 19.2 ಓವರ್ಗಳಲ್ಲಿ 159 ರನ್ ಗಳಿಸಿ ಆಲೌಟ್ ಆಯಿತು. ರಾಯಲ್ಸ್ ಪರ 52 ರನ್ ಗಳಿಸಿದ ಶಿಮ್ರಾನ್ ಹೆಟ್ಮೇರ್ ಹಾಗೂ 41 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅಲ್ಪ ಪ್ರತಿರೋಧ ತೋರಿದರೂ ಉತ್ತಮ ದಾಳಿ ಸಂಘಟಿಸಿದ ಜಿಟಿ ಬೌಲರ್ಗಳು ಮೇಲುಗೈ ಸಾಧಿಸಿದರು. ಪ್ರಸಿದ್ಧ ಕೃಷ್ಣ 3, ರಶೀದ್ ಖಾನ್, ಸಾಯ್ ಕಿಶೋರ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯ್ ಸುದರ್ಶನ್ 82 ರನ್ ಗಳಿಸಿ ಮಿಂಚಿದರು. ಜೋಸ್ ಬಟ್ಲರ್ ಹಾಗೂ ಶಾರುಖ್ ಖಾನ್ ತಲಾ 36ರನ್ ಗಳಿಸಿದರು. 12 ಎಸೆತಗಳಲ್ಲಿ 24 ರನ್ ಗಳಿಸಿದ ರಾಹುಲ್ ತೆವಾಟಿಯಾ ಹಾಗೂ 4 ಎಸೆತಗಳಲ್ಲಿ12 ರನ್ ಬಾರಿಸಿದ ರಶೀದ್ ಖಾನ್ ಕೊನೆಯಲ್ಲಿ ರನ್ ಏರಿಸಲು ನೆರವಾದರು.