ಮುಲ್ಲನಪುರ: ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ಎದುರು ಐದು ಎಸೆತಗಳಿರುವಂತೆ ಮೂರು ವಿಕೆಟ್ಗಳಿಂದ ಜಯಿಸಿತು.
ಪಂಜಾಬ್ ತಂಡವು 20 ಓವರ್ಗಳಲ್ಲಿ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟನ್ಸ್ ತಂಡದ
ಸ್ಪಿನ್ನರ್ಗಳಾದ ಸಾಯಿಕಿಶೋರ್ (33ಕ್ಕೆ4) ಮತ್ತು ನೂರ್ (20ಕ್ಕೆ2 ), ಸ್ಪಿನ್ನರ್ ರಶೀದ್ ಖಾನ್ (15ಕ್ಕೆ1) ಅವರು ಬ್ಯಾಟರ್ಗಳನ್ನು ನಿಯಂತ್ರಿಸಿದರು.
ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.1 ಓವರ್ಗಳಲ್ಲಿ 7 ವಿಕೆಟ್ಗಳಿಗೆ 146 ರನ್ ಗಳಿಸಿ ಗೆದ್ದಿತು. ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ (35; 29ಎ), ಸಾಯಿ ಸುದರ್ಶನ್ (31; 34ಎ) ಹಾಗೂ ರಾಹುಲ್ ತೆವಾಟಿಯಾ (36; 18ಎ) ಕೊಡುಗೆ ನೀಡಿದರು.
ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಹಂಗಾಮಿ ನಾಯಕ ಸ್ಯಾಮ್ ಕರನ್ (20; 19ಎ, 4X2) ಮತ್ತು ಪ್ರಭಸಿಮ್ರನ್ ಸಿಂಗ್ (35; 21ಎ) ಅವರು ಉತ್ತಮ ಆರಂಭ ನೀಡಿದರು.ಕೊನೆಯಲ್ಲಿ ಹರಪ್ರೀತ್ ಸಿಂಗ್ (14; 19ಎ) ಮತ್ತು ಹರಪ್ರೀತ್ ಬ್ರಾರ್ (29; 12ಎ, 4X4, 6X1) ಸ್ವಲ್ಪ ಹೋರಾಟ ನಡೆಸಿ ಸಾಧಾರಣ ಮೊತ್ತ ಪೇರಿಸಿದರು.