ನವದೆಹಲಿ: ಗುಜರಾತ್ ಟೈಟನ್ಸ್ ತಂಡವು 10 ವಿಕೆಟ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು. ಶುಭಮನ್ ಗಿಲ್ ನಾಯಕತ್ವದ ಬಳಗವು ಈ ಗೆಲುವಿನೊಂದಿಗೆ ಒಟ್ಟು 18 ಅಂಕಗಳಿಸಿ ಪ್ಲೇಆಫ್ಗೆ ಲಗ್ಗೆ ಇಟ್ಟಿತು. ತಲಾ 17 ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳೂ ಪ್ಲೇಆಫ್ ಪ್ರವೇಶಿಸಿದವು. ಈ ಸುತ್ತಿಗೆ ಪ್ರವೇಶಿಸುವ ನಾಲ್ಕನೇ ತಂಡ ನಿರ್ಧಾರವಾಗಬೇಕಿದೆ. ಅದಕ್ಕಾಗಿ
ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಸ್ಪರ್ಧೆಯಲ್ಲಿವೆ. ಅರುಣ್ ಜೇಟ್ಲಿ ಕ್ರೀಡಾಂಗಣ ದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೈಟನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ (ಔಟಾಗದೇ 112; 65ಎ) ಅವರ ಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 199 ರನ್ ಗಳಿಸಿತು.ಇದಕ್ಕುತ್ತರವಾಗಿ ಟೈಟನ್ಸ್ ತಂಡವು 19 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 205 ರನ್ ಗಳಿಸಿತು. ಸಾಯಿ ಸುದರ್ಶನ್ (ಅಜೇಯ 108; 61ಎ, 4×12, 6×4) ಮತ್ತು ಶುಭಮನ್ ಗಿಲ್ (ಔಟಾಗದೇ 93; 53ಎ, 4×3, 6×7) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಮೊದಲ ವಿಕೆಟ್ಗೆ ದ್ವಿಶತಕದ ಜೊತೆಯಾಟ ಕಟ್ಟಿದ ಸಾಯ್-ಗಿಲ್ ದಾಖಲೆ
ಬರೆದರು. ಡೆಲ್ಲಿ ಪರ ರಾಹುಲ್ಗರ ಅಭಿಷೇಕ್ ಪೊರೆಲ್ (30; 19ಎ, 4×1, 6×3) ಉತ್ತಮ ಜೊತೆ ನೀಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 90 (52ಎ) ರನ್ ಕಲೆಹಾಕಿದರು.
60 ಎಸೆತಗಳಲ್ಲಿ ಶತಕದ ಗಡಿ ದಾಟಿದ ರಾಹುಲ್ಗೆ ಐಪಿಎಲ್ನಲ್ಲಿ ಇದು 5ನೇ ಶತಕವಾಗಿದೆ.ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ತಮಿಳುನಾಡಿನ ಆಟಗಾರ ಸಾಯಿ ಪ್ರಸಕ್ತ ಐಪಿಎಲ್ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. 56 ಎಸೆತಗಳಲ್ಲಿ 100ರ ಗಡಿ ದಾಟಿದರು. 12 ಬೌಂಡರಿ ಹೊಡೆದ ಸಾಯಿ, ಮೂರು ಅಮೋಘ ಸಿಕ್ಸರ್ಗಳನ್ನೆತ್ತಿದರು. ಗಿಲ್ ಅವರು ಈ ಟೂರ್ನಿಯಲ್ಲಿ ಎರಡನೇ ಸಲ 90ಕ್ಕಿಂತ ಹೆಚ್ಚು ಮೊತ್ತವನ್ನು ದಾಖಲಿಸಿದರು.