ಸುಳ್ಯ:ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ರಾಜ್ಯಾಧ್ಯಂತ ಪ್ರಾರಂಭಗೊಂಡಿದ್ದು, ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಸುಳ್ಯ ನಗರ ವ್ಯಾಪ್ತಿಯವರಿಗೆ ನೋಂದಣಿ ಕೇಂದ್ರ ತೆರೆಯಲಾಗಿದೆ. ಸುಳ್ಯ ನಗರ ಪಂಚಾಯತ್ನಲ್ಲಿರುವ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರ ಕೇಂದ್ರಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲನೆ ನಡೆಸಿದರು. ನಗರ ಪಂಚಾಯತ್ ನಲ್ಲಿ 2 ಕೇಂದ್ರ ಕಾರ್ಯಚರಿಸುತ್ತಿದ್ದು ದಿನಕ್ಕೆ
60ಮಂದಿಯಂತೆ ನೋಂದಣಿ ನಡೆಯುತ್ತಿದೆ. ಹಾಗೂ ತಾಲೂಕು ಕಚೇರಿ ಬಳಿ ಇ -ಕ್ಲಿನಿಕ್ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಸಹ ನೋಂದಣಿ ಕಾರ್ಯ ನಡೆಯುತ್ತಿದೆ. ನಗರಪಂಚಾಯತ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಭವಾನಿಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ರಾಜು ಪಂಡಿತ್ ಹಾಗೂ ಸುಳ್ಯ ತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್,ಮತ್ತಿತರರು ಉಪಸ್ಥಿತರಿದ್ದರು.