ಸುಳ್ಯ:ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ. ವಿ. ಉದ್ಘಾಟನೆ ನಡೆಯಿತು.ಮೀಫ್ ಶೈಕ್ಷಣಿಕ ಒಕ್ಕೂಟ ದಾನಿಗಳಾದ ಉದ್ಯಮಿ ಭಾರತ್ ಮುಸ್ತಫ ಮಂಗಳೂರು ಇವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ. ವಿ.ಯನ್ನು ಅಳವಡಿಸಿ
ಹುಬ್ಬಳ್ಳಿ ಡಿಜಿಟೆಕ್ ಎಂ ಡಿ ಅನ್ವರ್ ಶಾಲಾ ಶಿಕ್ಷಕರಿಗೆ ಬಳಕೆಯ
ವಿಧಾನ ಗಳನ್ನು, ಸಾಫ್ಟ್ ವೆರ್ ಕಂಟೆಂಟ್, ಉಪ ಗ್ರಹ ಆಧಾರಿತ ಬೋಧನೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ, ಶಿಕ್ಷಕರಾದ ಜಯಂತಿ ಕಂಪ್ಯೂಟರ್ ಶಿಕ್ಷಕಿ ಉಷಾ,ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್, ಕೆ.ಎಸ್.ಉಮ್ಮರ್, ಶಾಫಿ ಕುತ್ತಮೊಟ್ಟೆ, ಅಬ್ದುಲ್ ಮಜೀದ್ ಮತ್ತಿತರರು ಉಪಸ್ಥಿತರಿದ್ದರು.













