ಸುಳ್ಯ:ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾ ಕೂಟ ಜರಗಿತು.ಕ್ರೀಡಾಕೂಟದ ಉದ್ಘಾಟನೆಯನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಉದ್ಘಾಟಿಸಿದರು. ಕ್ರೀಡೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಮಾನಸಿಕ ಮತ್ತು
ದೈಹಿಕ ಕ್ಷಮತೆಗೆ ಸಹಕಾರಿ ಎಂದು ಅವರು ಹೇಳಿದರು.
ಅನ್ಸಾರಿಯಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಧ್ವಜಾರೋಹಣಗೈದರು.ಮುಖ್ಯ ಶಿಕ್ಷಕರಾದ ಇಲ್ಯಾಸ್. ಕೆ. ಕಾಶಿಪಟ್ಟಣ ಸ್ವಾಗತಿಸಿದರು.ಗ್ರೀನ್ ವ್ಯೂ ಸಂಸ್ಥೆಯ ಸಂಚಾಲಕ ಕೆ. ಎಂ. ಮುಸ್ತಫ ಪ್ರಸ್ತಾವನೆಗೈದರು ಅಧ್ಯಕ್ಷ ಅಬ್ದುಲ್ ಮಜೀದ್ ಬಣ್ಣ ಬಣ್ಣದ ಬಲೂನ್ ಗಳನ್ನು ಬಾನೆತ್ತರಕ್ಕೆ ಹಾರಿಸಿ ಶುಭ ಕೋರಿದರು
ವೇದಿಕೆಯಲ್ಲಿ ಶಾಲಾ ಸಂಯೋಜಕರಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಮೊಟ್ಟೆ, ಆಡಳಿತ ಸಮಿತಿ ಸದಸ್ಯರು ಗಳಾದ ಎಸ್.ಎಂ.ಅಬ್ದುಲ್ ಹಮೀದ್, ಉಬೈದುಲ್ಲಾ ಸಾಲಿ ಕಟ್ಟೆಕ್ಕಾರ್ಸ್, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಎನ್. ಎ. ಅಬ್ದುಲ್ಲ, ಸದಸ್ಯಎಸ್. ಪಿ. ಅಬೂಬಕ್ಕರ್,ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯ ಸಿದ್ದೀಕ್ ಕೊಕ್ಕೋ ಉಪಸ್ಥಿತರಿದ್ದರು
ದೈಹಿಕ ಶಿಕ್ಷಣ ಶಿಕ್ಷಕ ಪೀರ್ ಸಾಬ್ ಪಥ ಸಂಚಲನದ ಉಸ್ತುವಾರಿ ವಹಿಸಿದ್ದರು.ಶಾಲಾ ವಿದ್ಯಾರ್ಥಿ ನಾಯಕ
ಅಲ್ಲಾವುದ್ದೀನ್ ಪ್ರತಿಜ್ಞಾ ವಿಧಿ ಬೋಧಿಸಿದರು.ಶಿಕ್ಷಕಿ ಫಾತಿಮ ವಂದಿಸಿದರು.ಶಿಕ್ಷಕರುಗಳಾದ ರಮ್ಯಾ,ಅಶ್ವಿನಿ ಮತ್ತು ರಂಜಿತ್ ಕಾರ್ಯಕ್ರಮ ನಿರೂಪಿಸಿದರು.
















