ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ಗ್ರಾಂಡ್ ಪೆರೇಂಟ್ಸ್ ಡೇ ಆಚರಣೆ ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ಹಿರಿಯರಾದ ಚಂದ್ರಶೇಖರ್ ಅವರು ಭಾಗವಹಿಸಿದ್ದರು. ಸಂಸ್ಥೆಯ ಪುಟಾಣಿ ಮಕ್ಕಳ
ಅಜ್ಜ ಅಜ್ಜಿಯಂದಿರು ಭಾಗವಹಿಸಿದ್ದರು. ಅಜ್ಜ ಅಜ್ಜಿಯಂದಿರಿಗೆ ಲಿಂಬೆ ಚಮಚ ಹಾಗೂ ಸಂಗೀತ ಕುರ್ಚಿ ಆಟಗಳನ್ನು ಏರ್ಪಡಿಸಲಾಗಿತ್ತು. ಅಜ್ಜಿಯಂದಿರು ತಮ್ಮ ಕೈರುಚಿಯನ್ನು ಪುಟಾಣಿ ಗಳಿಗೆ ಕೈತ್ತುತ್ತು ನೀಡಿ ಸಂಭ್ರಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಅವರು ವಹಿಸಿದ್ದರು. ಅಜ್ಜಿಯಂದಿರು ಮಕ್ಕಳಿಗೆ ಕಥೆ ಹೇಳಿದರು.