ಸುಳ್ಯ:ಪ್ರವಾದಿ ಮುಹಮ್ಮದ್ ಮುಸ್ತಫ ಅವರ 1497 ನೇ ಜನ್ಮದಿನಾಚರಣೆ
ಈದ್ ಮೀಲಾದ್ ವಿವಿಧ ಕಾರ್ಯಕ್ರಮಗಳೊಂದಿಗೆ ಗಾಂಧಿನಗರ ಮಸ್ಜಿದ್‌ನಲ್ಲಿ ನಡೆಯಿತು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಕೆ ಎಂ ಮುಸ್ತಫ ಧ್ವಜಾರೋಹಣ ಗೈದರು ಮುದರ್ರಿಸ್ ಶರಫುದ್ದೀನ್ ಸಅದಿ ಉದ್ಘಾಟನೆ
ನೆರವೇರಿಸಿದರು. ಖತೀಬ್ ಅಶ್ರಫ್ ಖಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಹಾಜಿ ಮಹಮ್ಮದ್ ಬಾರ್ಪಣೆ, ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ಖಜಾಂಚಿ ಮೊಯಿದೀನ್ ಫ್ಯಾನ್ಸಿ, ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಹಮೀದ್ ಬೀಜ ಕೊಚ್ಚಿ, ಎಸ್ ಎಂ ಹಮೀದ್,ಮಾಜಿ ಅಧ್ಯಕ್ಷ ಆದಂ ಹಾಜಿ, ನಿರ್ದೇಶಕರಾದ ಎಸ್.ಎ.ಹಮೀದ್ ಹಾಜಿ, ಖಾದರ್ ಆಜಾದ್,ಅನ್ಸಾರ್ ಅಧ್ಯಕ್ಷ ಅಬ್ದುಲ್ ಶುಕೂರ್,ಕಾರ್ಯದರ್ಶಿ ಬಿ. ಎಂ. ಹನೀಫ್,ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಧಿಕಾರಿ ಎಸ್ ಪಿ ಅಬೂಬಕ್ಕರ್,ಮಾಜಿ ನಿರ್ದೇಶಕ ಗಫಾರ್ ಹಾಜಿ,ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮುಅಝೀನ್ ಝವುಅರಿ ಉಸ್ತಾದ್ ಖುರ್ ಆನ್ ಪಾರಾಯಣ ನಡೆಸಿದರು