ಸುಳ್ಯ:ಗ್ರಾಮೀಣ ಪ್ರದೇಶಗಳಲ್ಲಿ 9/11,ಕಟ್ಟಡ ಪರವಾನಿಗೆ ಪ್ರಾಧಿಕಾರದಿಂದ ಪಡೆಯಲು ಗ್ರಾಮ ಪಂಚಾಯತ್ ರಸ್ತೆಗಳಿಗೆ ದೃಢ ಪತ್ರ ನೀಡಲು ಮಾರ್ಗಸೂಚಿ ಹೊರಡಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ವಿನಾಯಕ ನರ್ವಾಡೆ ಅವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ ಮಾಡಿದರು.ನಗರ ಮತ್ತು ಗ್ರಾಮಾoತರ ವ್ಯಾಪ್ತಿಯಲ್ಲಿ 9/11 ಮತ್ತು ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಲು
ಸರ್ಕಾರದ ನಿಯಮದಂತೆ ಪ್ರಾಧಿಕಾರಗಳ ಮತ್ತು ಜಿಲ್ಲಾ ಸಹಾಯಕ ನಿರ್ದೇಶಕರ ಅನುಮೋದನೆ ಅವಶ್ಯಕತೆ ಇರುತ್ತದೆ, ಗ್ರಾಮಾಂತರ ಗಳಿಂದ ಸ್ವೀಕರಿಸುವ ಪ್ರಸ್ತಾವನೆ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮುಖ್ಯವಾಗಿ ಗ್ರಾಮ ಪಂಚಾಯತ್ ರಸ್ತೆಗಳಿಗೆ ಗ್ರಾಮ ಪಂಚಾಯತ್ನಿಂದ ದೃಢಪತ್ರ ದ ಅವಶ್ಯಕತೆ ಇರುತ್ತದೆ ಕೆಲವು ಸಂದರ್ಭದಲ್ಲಿ ಹಾಲಿ ಬಳಕೆಯಲ್ಲಿರುವ ಗ್ರಾಮ ಪಂಚಾಯತ್ ವಿವಿಧ ಯೋಜನೆಯಡಿ ಅಭಿವೃದ್ಧಿ ಪಡಿಸಿದ ಸಾರ್ವಜನಿಕ ರಸ್ತೆಗಳು ದಾಖಲೆ ಗಳ ಪ್ರಕಾರ ಪಟ್ಟಾ ಭೂಮಿ ಅಥವಾ ಸರಕಾರಿ ಭೂಮಿ ಯಾಗಿರುತ್ತದೆ ರಸ್ತೆಗಳ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಸಗಿ ರಸ್ತೆಗಳನ್ನು ಭೂ ಪರಿವರ್ತನೆ ಮಾಡಿ ಹಸ್ತಾoತರ ಪ್ರಕ್ರಿಯೆ ಅಸಾಧ್ಯ ವಾಗುತ್ತದೆ.
ಈ ಸಂದರ್ಭದಲ್ಲಿ ಭೂಮಿ ಮಾಲಕರಿಂದ ಒಪ್ಪಿಗೆ ಪತ್ರ ಪಡೆದು, ಪರಿಶೀಲನೆ ನಡೆಸಿ ಪಂಚಾಯತ್ ಪ್ರಾಪರ್ಟಿ ದಾಖಲೆಗಳಲ್ಲಿ ನಮೂದಿಸಿ ಗ್ರಾಮ ಪಂಚಾಯತ್ಗಳಿಂದ ಹಾಲಿ ಉಪಯೋಗದ ರಸ್ತೆಯ ಬಗ್ಗೆ ದೃಢ ಪತ್ರ ನೀಡಿದಲ್ಲಿ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ರಸ್ತೆಯ ಬಗ್ಗೆ ದೃಢ ಪತ್ರ ನೀಡುವ ಸಲುವಾಗಿ ಸೂಕ್ತ ಮಾರ್ಗ ಸೂಚಿಗಳನ್ನು ಹೊರಡಿಸುವಂತೆ ಮನವಿ ಸಲ್ಲಿಸಿದ್ದಾರೆ.









