ಸುಳ್ಯ: ಎರಡೂವರೆ ವರ್ಷಗಳಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಪ್ರಥಮ ಎರಡೂವರೆ ವರ್ಷಗಳ ಅವಧಿ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಂದಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿಗೆ ದಿನಾಂಕ ನಿಗದಿಗೊಳಿಸಲಾಗಿದೆ. ಜೂ.13 ರಿಂದ 17ರ ತನಕ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾ.ಪಂ.ಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ
ನಿರ್ಣಯ ನಡೆಯಲಿದೆ. ಸುಳ್ಯ ತಾಲೂಕು ಮತ್ತು ಕಡಬ ತಾಲೂಕುಗಳ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ಜೂನ್ 17 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.17 ರಂದು ಪೂ.11 ರಿಂದ 12.30ರವರೆಗೆ ಸುಳ್ಯ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ಹಾಗೂ, 12.30 ರಿಂದ 1.30 ರ ತನಕ ಕಡಬ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ನಿರ್ಣಯ ಆಗಲಿದೆ. ಪುತ್ತೂರು, ಬೆಳ್ತಂಗಡಿ ತಾಲೂಕಿನ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷತೆಗೆ ಜೂನ್ 16 ರಂದು ಮೀಸಲಾತಿ ನಿಗದಿಯಾಗಲಿದೆ. ಜೂ.13ರಂದು ಮಂಗಳೂರು,ಉಳ್ಳಾಲ, 14ರಂದು ಮೂಲ್ಕಿ, ಮೂಡಬಿದ್ರೆ, 15ರಂದು ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ನಿರ್ಣಯ ನಡೆಯಲಿದೆ. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಹೊಸ ಮೀಸಲಾತಿ ಪ್ರಕಾರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯಲಿದೆ.