ಸುಳ್ಯ: ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ಗಳ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಇಂದು(ಆ.10) 10 ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯಲಿದೆ.ಇಂದು
ಕೊಡಿಯಾಲ, ಕಳಂಜ, ಐವತ್ತೊಕ್ಲು(ಪಂಜ) ಗುತ್ತಿಗಾರು, ನೆಲ್ಲೂರು ಕೆಮ್ರಾಜೆ, ಆಲೆಟ್ಟಿ,ಮರ್ಕಂಜ, ಅರಂತೋಡು, ಜಾಲ್ಸೂರು, ಮಂಡೆಕೋಲು ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯಲಿದೆ. ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ಗಳ ಪೈಕಿ 14 ಗ್ರಾ.ಪಂ. ಅಧ್ಯಕ್ಷ ಹಾಗೂ 15 ಗ್ರಾ.ಪಂ. ಉಪಾಧ್ಯಕ್ಷ ಆಯ್ಕೆ ನಡೆದಿದೆ. ದೇವಚಳ್ಳ ಗ್ರಾ.ಪಂ.ಅಧ್ಯಕ್ಷತೆ ಆ.11 ರಂದು ನಡೆಯಲಿದೆ. ದೆವಚಳ್ಳದಲ್ಲಿ ಉಪಾಧ್ಯಕ್ಷ ಚುನಾವಣೆ ಮಾತ್ರ ನಡೆದಿದೆ. ಅಧ್ಯಕ್ಷತೆಯ ನಾಮಪತ್ರ ಹಿಂಪಡೆದ ಕಾರಣ ಅಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.