ಸುಳ್ಯ: ವಿವಿಧ ಗ್ರಾಮ ಪಂಚಾಯತ್ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು. ಮುಂದಿನ ಎರಡೂವರೆ ವರ್ಷದ ಅವಧಿಗೆ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ಗಳ ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಅಧ್ಯಕ್ಷ
ಉಪಾಧ್ಯಕ್ಷರಾಗಿ ಆಯ್ಕೆಯಾದವರು.
ಗುತ್ತಿಗಾರು:
ಗುತ್ತಿಗಾರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿಯ ಸುಮಿತ್ರಾ ಮೂಕಮಲೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಭಾರತಿ ಸಾಲ್ತಾಡಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಸುಮಿತ್ರಾ ಮೂಕಮಲೆ 9 ಮತ ಪಡೆದರೆ , ಗ್ರಾಮ ಭಾರತದ ತಂಡದ ಲತಾ ಆಜಡ್ಕ ಅವರು 4 ಮತ ಪಡೆದರು.ಉಪಾಧ್ಯಕ್ಷತೆಗೆ ಸ್ಪರ್ಧಿಸಿದ್ದ ಬಿಜೆಪಿಯ ಭಾರತಿ ಸಾಲ್ತಾಡಿ 6 ಮತ ಹಾಗೂ ಗ್ರಾಮ ಭಾರತ ತಂಡದ ವಸಂತ ಮೊಗ್ರ 4 ಮತ ಪಡೆದರು.
ಒಟ್ಟು 17 ಸ್ಥಾನಗಳನ್ನು ಹೊಂದಿರುವ ಗುತ್ತಿಗಾರು ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 13 ಸದಸ್ಯರಿದ್ದು, ಗ್ರಾಮ ಭಾರತ ತಂಡದ 4 ಸದಸ್ಯರಿದ್ದಾರೆ. ಅಧ್ಯಕ್ಷತೆ ಆಯ್ಕೆ ಅಸಮಾಧಾನದಿಂದ ಬಿಜೆಪಿಯ 4 ಗ್ರಾ.ಪಂ ಸದಸ್ಯರು ಮತದಾನದಿಂದ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹಾಗೂ ಸಹಾಯಕರಾಗಿ ಚುನಾವಣಾ ಅಧಿಕಾರಿಯಾ ಪಿ.ಡಿ.ಒ ಧನಪತಿ ಸಹಕರಿಸಿದರು.
ಮರ್ಕಂಜ:
ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಗೀತಾ ಹೊಸೊಳಿಕೆ ಅವಿರೋಧವಾಗಿ ಆಯ್ಮೆಯಾಗಿದ್ದಾರೆ. ಉಪಾಧ್ಯಕ್ಷತೆಗೆ ಚುನಾವಣೆ ನಡೆದು ಉಪಾಧ್ಯಕ್ಷರಾಗಿ ಸಂಧ್ಯಾ ಸೇವಾಜೆ ಪಾರೆಮಜಲು ಅಯ್ಕೆಯಾಗಿದ್ದಾರೆ.
ಉಪಾಧ್ಯಕ್ಷತೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದವು.ಅದರಲ್ಲಿ ನಾಗವೇಣಿ ಶೆಟ್ಟಿ ಮಜಲು ನಾಪತ್ರ ಹಿಂಪಡೆದರೆ, ಸಂಧ್ಯಾ ಸೇವಾಜೆ ಪಾರೆಮಜಲು ಮತ್ತು ರಮತ ಕುದ್ಕುಳಿ ಅಂತಿಮವಾಗಿ ಕಣದಲ್ಲಿದ್ದರು. ಚುನಾವಣೆ ನಡೆದಾಗ 6 ಮತ ಪಡೆದ ಸಂಧ್ಯಾ ಸೇವಾಜೆ ಪಾರೆಮಜಲು ಉಪಾಧ್ಯಕ್ಷರಾಗಿ ಆಯ್ಕೆಯಾದರು.ರಮತ ಕುದ್ಕುಳಿ 2 ಮತ ಪಡೆದರು.
ಮಂಡೆಕೋಲು:
ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕುಶಲ ಉದ್ದಂತಡ್ಕ ಹಾಗು ಉಪಾಧ್ಯಕ್ಷರಾಗಿ ಪ್ರತಿಮಾ ಹೆಬ್ಬಾರ್ ಅವಿರೋಧ ಆಯ್ಕೆವಾಗಿ ಆಯ್ಕೆಯಾದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಡಾ.ಸುಂದರ ಕೇನಾಜೆ ಚುನಾವಣಾಧಿಕಾರಿಯಾಗಿದ್ದರು.
ಕೊಡಿಯಾಲ:
ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಹರ್ಷನ್ ಕೆ.ಟಿ. ಹಾಗೂ ಉಪಾಧ್ಯಕ್ಷರಾಗಿ ಚಿತ್ರಾ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ನಡೆಯಿತು.ಪೆರುವಾಜೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಮಚಂದ್ರ ಕೆ.ಚುನಾವಣಾಧಿಕಾರಿಯಾಗಿದ್ದರು.
ಆಲೆಟ್ಟಿ:
ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವೀಣಾ ವಸಂತ ಹಾಗೂ ಉಪಾಧ್ಯಕ್ಷರಾಗಿ ಕೆ.ಕಮಲ ನಾಗಪಟ್ಟಣ ಅವಿರೋಧವಾಗಿ ಆಯ್ಕೆಯಾದರು. ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್ ಚುನಾವಣಾಧಿಕಾರಿಯಾಗಿದ್ದರು.
ಕಳಂಜ:
ಕಳಂಜ ಗ್ರಾ.ಪಂ.ನ ಅಧ್ಯಕ್ಷರಾಗಿ ಬಾಲಕೃಷ್ಣ ಬೇರಿಕೆ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಲತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜಿ.ಪಂ. ಇಂಜಿನಿಯರ್ ಮಣಿಕಂಠ ಚುನಾವಣಾ ಅಧಿಕಾರಿಯಾಗಿದ್ದರು.
ನೆಲ್ಲೂರು ಕೆಮ್ರಾಜೆ:
ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಧನಂಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ವಂದನಾ ಹೊಸ್ತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬಣ್ಣ ಪೂಜೇರಿ ಚುನಾವಣಾಧಿಕಾರಿಯಾಗಿದ್ದರು.
ಐವತ್ತೊಕ್ಲು(ಪಂಜ)
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ವಿಜಯಲಕ್ಷ್ಮೀ ಜಳಕದಹೊಳೆ (ಕಲ್ಕ)ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಕೃಷ್ಣನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು.
ಸುಬ್ರಹ್ಮಣ್ಯ:
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಜಾತಾ ಕಲ್ಲಾಜೆ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಎಚ್.ಎಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಲೋಕೋಪಯೋಗಿ ಇಲಾಖೆಯ ಸುಬ್ರಹ್ಮಣ್ಯ ಉಪ ವಿಭಾಗದ ಎ.ಇ.ಇ ಪ್ರಮೋದ್ ಕುಮಾರ್ ಕೆ.ಚುನಾವಣಾ ಅಧಿಕಾರಿಯಾಗಿದ್ದರು.
ಕೊಡಗು ಸಂಪಾಜೆ:
ಕೊಡಗು ಸಂಪಾಜೆ ಗ್ರಾ.ಪಂ.ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ರಮಾದೇವಿ ಕಳಗಿ ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಬಾಲಕೃಷ್ಣ ಅರೆಕಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.