ಸುಳ್ಯ: ಎರಡೂವರೆ ವರ್ಷಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಪ್ರಥಮ ಎರಡೂವರೆ ವರ್ಷಗಳ ಅವಧಿ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಂದಿನ ಅವಧಿಯ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿಗೆ ದಿನಾಂಕ ನಿಗದಿಗೊಳಿಸಲಾಗಿದೆ.ಸುಳ್ಯ ತಾಲೂಕು ಮತ್ತು ಕಡಬ ತಾಲೂಕುಗಳ ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷತೆಗೆ
ಮೀಸಲಾತಿ ನಿಗದಿ ಇಂದು(ಜೂನ್ 17) ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.17 ರಂದು ಪೂ.11 ರಿಂದ 12.30ರವರೆಗೆ ಸುಳ್ಯ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ಹಾಗೂ, 12.30 ರಿಂದ 1.30 ರ ತನಕ ಕಡಬ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ನಿರ್ಣಯ ಆಗಲಿದೆ. ಪುತ್ತೂರು, ಬೆಳ್ತಂಗಡಿ ಮಂಗಳೂರು,ಉಳ್ಳಾಲ, ಮೂಲ್ಕಿ, ಮೂಡಬಿದ್ರೆ, ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ನಿರ್ಣಯ ನಡೆದಿದೆ. ಸುಳ್ಯ ಹಾಗೂ ಕಡಬ ತಾಲೂಕಿನ ಮೀಸಲಾತಿ ನಿರ್ಣಯ ಮಾಡುವುದರೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾ.ಪಂ.ಮೀಸಲಾತಿ ನಿರ್ಣಯ ಪೂರ್ತಿಯಾಗಲಿದೆ. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಹೊಸ ಮೀಸಲಾತಿ ಪ್ರಕಾರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯಲಿದೆ.