ಸುಳ್ಯ:ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವು ಆ. 3 ರಂದು ಸುಳ್ಯದ ಕೋಡಿಯಾಲ ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು
ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೊಡಿಯಾಲಬೈಲು ಆಡಳಿತ ಸಮಿತಿ ಅಧ್ಯಕ್ಷ ರಾಮಕೃಷ್ಣ ಅಮೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷತೆ ವಹಿಸಿದ ಪಿ.ಎಸ್ ಗಂಗಾಧರ ಪ್ರಾಸಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಗೌಡ ಸಮಿತಿಯ ಅಧ್ಯಕ್ಷ ರಾಕೇಶ್ ಕುಂಟಿಕಾನ , ಗೌಡರ ಯುವ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತ ಪಾತಿಕಲ್ಲು, , ಮಹಿಳಾ ನಗರ ಘಟಕ ಕಾರ್ಯದರ್ಶಿ ಸುಜಾತ ಕಿರಣ ಕುರುಂಜಿ , ಸಮಿತಿಯ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ನಗರ ಘಟಕ ಅಧ್ಯಕ್ಷೆ ಹರ್ಷಾ ಕರುಣಾಕರ ಸ್ವಾಗತಿಸಿ, ನಗರ ಗೌಡರ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ ವಂದಿಸಿ, ಲತಾಶ್ರೀ ಸುಪ್ರೀತ್ ಮೋಟoಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪುರುಷರಿಗೆ , ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.





