ಸುಳ್ಯ:ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕದ ಆಶ್ರಯದಲ್ಲಿ 13ನೇ ವರ್ಷದ ಆಟಿ ಸಂಭ್ರಮ ಇಂದು (ಆ.3) ಸುಳ್ಯದ ಕೋಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ .ಆಟಿ ಆಚರಣೆಯನ್ನು
ನಾಟಿ ವೈದ್ಯರಾದ ಜನಾರ್ಧನ ಗೌಡ ಸೂಂತೋಡು ಮತ್ತು ವಸಂತಿ ದಂಪತಿಗಳು ಉದ್ಘಾಟಿಸಲಿದ್ದಾರೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ವಕೀಲರಾದ ರಾಮಕೃಷ್ಣ ಅಮೈ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ವಯೋಮಾನದವರಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಲಾಗುವುದು.
ಸಮಾರೊಪ ಸಮಾರಂಭದಲ್ಲಿ ಆಟಿ ತಿಂಗಳ ಮಹತ್ವದ ಕುರಿತು ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಚಂದ್ರಶೇಖರ ಪೇರಾಲು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ, ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ ಡಾ. ಕೇಶವ ಸುಳ್ಳಿ, ಎಂ. ಡಿ ನಿರಂಜನ್,ನವೀತ್ ಕಂದಡ್ಕ, ಡಾ. ಅಭಿಜ್ಞಾ, ತಿಮ್ಮಪ್ಪ ಗೌಡ ನಾವೂರು, ಮಾಯಿಲಪ್ಪ ಗೌಡ ಸೂಂತೋಡು, ಸೋನಾ ಅಡ್ಕಾರ್, ಭೂಮಿಕಾ ಅವರನ್ನು ಸನ್ಮಾನಿಸಲಾಗುವುದು ಎಂದು ಎಂದು ಗೌಡರ ಯುವ ಸೇವಾ ಸಂಘದ ನಗರ ಸಮಿತಿ ಅಧ್ಯಕ್ಷ ರಾಕೇಶ್ ಕುಂಟಿಕಾನ ತಿಳಿಸಿದ್ದಾರೆ.





