ಸುಳ್ಯ:ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ವತಿಯಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ಗೌಡ ಸಮುದಾಯದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ ‘ಗೌಡ ಮಹಿಳಾ ಕಪ್’ ಡಿ.21 ರಂದು ನಡೆಯಲಿದೆ ಎಂದು
ತಾಲೂಕು ಮಹಿಳಾ ಘಟಕದ ಪಧಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನೂತ ಪಾತಿಕಲ್ಲು ಮಾತನಾಡಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಮಹಿಳೆಯರಿಗಾಗಿ ಪ್ರಥಮ ಭಾರಿಗೆ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದೆ. ತಂಡದ ಹೆಸರು ನೋಂದಾಯಿಸಲು ಡಿ.14 ಕೊನೆ ದಿನ ಆಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್, ಮಹಿಳಾ ಕಪ್ ಸಂಚಾಲಕರಾದ ಬೀನಾ ಕರುಣಾಕರ ಅಡ್ಪಂಗಾಯ, ಜಯಲಕ್ಷ್ಮಿ ನಾರ್ಕೋಡು, ಸಹ ಸಂಚಾಲಕರಾದ ಮೀನಾಕ್ಷಿ ಸುಂದರ ರಾಮಕಜೆ, ಕುಸುಮಾ ಜನಾರ್ಧನ ಕೊಳಂಜಿರೋಡಿ ಉಪಸ್ಥಿತರಿದ್ದರು.












