ಸುಳ್ಯ:ಶಿಕ್ಷಣ ಪಡೆದು ವಿದ್ಯಾರ್ಥಿಗಳು ಸಂಪಾದಿಸಬಹುದಾದ ಬಹುದೊಡ್ಡ ಸಂಪತ್ತು ವಿದ್ಯೆ. ಖರ್ಚಾದಷ್ಟು ಹೆಚ್ಚಾಗುವ ಸಂಪತ್ತು ಎಂದರೆ ಅದು ವಿದ್ಯಾಸಂಪತ್ತು ಎಂದು ವಾಗ್ಮಿ ಎನ್.ಆರ್.ದಾಮೋದರ ಶರ್ಮ ಹೇಳಿದರು. ಅವರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಂಸ್ಕಾರ ಇಲ್ಲದ ಬದುಕು ಬದುಕೇ ಅಲ್ಲ. ಅಪ್ಪ-ಅಮ್ಮ ಅಭಿಮಾನದಿಂದ ಹೇಳುವಂತೆ ನಾವು ಬದುಕಬೇಕು. ವಿದ್ಯೆ ನೀಡಿದ
ಗುರು-ಹಿರಿಯರಿಗೆ ವಿಧೇಯರಾಗಿ ಬದುಕಬೇಕು. ವಿದ್ಯಾರ್ಥಿಗಳು ಈ ಸಮಾಜದ ದೊಡ್ಡ ಕೊಡುಗೆ. ಸಂಸ್ಕಾರಯುತ, ಸಮಾಜಮುಖಿ ಬದುಕು ನಮ್ಮದಾಗಬೇಕು. ಸಾಧಕರ ಬದುಕನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ಅಮೃತಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಒಳ್ಳೆಯದನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ, ಬದುಕು ಉತ್ತಮವಾಗಲಿದೆ. ನಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು, ಗುರು ಹಿರಿಯರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಿಸ್ತು, ಪ್ರಾಮಾಣಿಕತೆ ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ ಎಂದರು.

ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಸಿಪ್ರಿಯನ್ ಮಂತೆರೋ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಅಮೃತಮಹೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿ ಎಂ.ಬಿ.ಸದಾಶಿವ, ಕೋಶಾಧಿಕಾರಿ ಅಶೋಕ ಪ್ರಭು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ, ಕಾಲೇಜಿನ ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ ಪಿ. ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಅಶೋಕ ಪ್ರಭು ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ವಂದಿಸಿದರು. ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ:
ಸಮಾರಂಭದಲ್ಲಿ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಡಾ.ಕೆ.ವಿ.ಚಿದಾನಂದ, ಸೀತಾರಾಮ ರೈ ಸವಣೂರು, ಎಂ.ಬಿ.ಸದಾಶಿವ, ಅಶೋಕ ಪ್ರಭು, ಪಿ.ಬಿ.ಸುಧಾಕರ ರೈ, ಲಿಂಗಪ್ಪ ಗೌಡ, ರಾಮಚಂದ್ರ ಪಲ್ಲತ್ತಡ್ಕ, ಇಂಜಿನಿಯರ್, ವಿಜಯ ಕುಮಾರ್ ತುದಿಯಡ್ಕ, ಮಂಜುಳಾ ಬಡಿಗೇರ್, ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಸಂಸ್ಥೆಯಲ್ಲಿ ಸಲ್ಲಿಸಿದರು ಶಿಕ್ಷಕರಿಗೆ, ಅಡುಗೆ ಸಿಬ್ಬಂದಿಗಳಿಗೆ, ವಿವಿಧ ಸಮಿತಿಯ ಪ್ರಮುಖರು ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು.

















