ಸುಳ್ಯ:ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಡಿ. 27,28, 29 ದಿನಾಂಕಗಳಲ್ಲಿ ನಡೆಯಲಿದ್ದು ಇದರ ಪೂರ್ವಙಾವಿಯಾಗಿ ಸದ್ಭಾವನ ಓಟ ಕಾರ್ಯಕ್ರಮ ನಡೆಯಿತು.ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಹಾಗೂ
ಶಾಲಾ ಹಿರಿಯ ವಿದ್ಯಾರ್ಥಿ ಹಿರಿಯರಾದ ಗೋಪಾಲ್ ನಾಯರ್, ಅವರು ಸದ್ಭಾವನ ಓಟಕ್ಕೆ ಚಾಲನೆ ನೀಡಿದರು.
ಶಾಲಾ ಮೈದಾನದಿಂದ ಆರಂಭಗೊಂಡ ಓಟ ಜ್ಯೋತಿ ಸರ್ಕಲ್ ಬಳಿ ಬಂದು ಬಳಿಕ ಅಲ್ಲಿಂದ ಗಾಂಧಿನಗರಕ್ಕೆ ತೆರಳಿ ರಥ ಬೀದಿ ಮೂಲಕ ಕುರುಂಜಿಭಾಗ್ ಕುರುಂಜಿಯವರ ವೃತ್ತದ ಬಳಿ ಬಂದು ವಿವೇಕಾನಂದ ಸರ್ಕಲ್ ಮೂಲಕ ಸಂಚರಿಸಿ ಶಾಲಾ ಮೈದಾನದಲ್ಲಿ ಸಮಾರೋಪ ಗೊಂಡಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಬಿ ಸುಧಾಕರ್ ರೈ, ಉಪಾಧ್ಯಕ್ಷೆ ಡಾ.ವೀಣಾ, ಅಮೃತ ಮಹೋತ್ಸವ ಸಮಿತಿಯ ಸದಸ್ಯ ಗೋಕುಲ್ ದಾಸ್, ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಸದಸ್ಯರಾದ ರಮೇಶ್ ಕೊಡಂಕಿರಿ, ಸುಭಾಶ್ಚಂದ್ರ ಉಬ್ಬರಡ್ಕ ಮಿತ್ತೂರು, ರಾಜೇಶ್ ರೈ ಉಬರಡ್ಕ,
ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಕಾಲೇಜು ಉಪನ್ಯಾಸಕ ವೃಂದ,ಶಾಲಾ ಅಧ್ಯಾಪಕ ವೃಂದ,ಪೋಷಕರು, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.













