ಸುಳ್ಯ: ಒಡಿಸ್ಸಾದ ಭುವನೇಶ್ವರದ ಆರ್ಐಈ ಕ್ಯಾಂಪಸ್ಸಿನಲ್ಲಿ ಎನ್ಸಿಇಆರ್ಟಿ ವತಿಯಿಂದ ಜನಸಂಖ್ಯಾ ಶಿಕ್ಷಣ ಯೋಜನೆಯ ಅಡಿಯಲ್ಲಿ ಪಾತ್ರಾಭಿನಯ ಹಾಗು ಜನಪದ ನೃತ್ಯ ಸ್ಪರ್ಧೆ ನಡೆಯಿತು.ಈ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅವಳಿ ಪ್ರಶಸ್ತಿಗಳನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ವಿಶಿಷ್ಟ ಸಾಧನೆ ಮಾಡಿದೆ. ಜನಪದ ನೃತ್ಯದಲ್ಲಿ

ಜನಪದ ನೃತ್ಯ ಪ್ರಥಮ ಪಡೆದ ತಂಡ

ಇಂಗ್ಲೀಷ್ ಪಾತ್ರಾಭಿನಯ-ತೃತೀಯ
ಪ್ಲಾಸ್ಟಿಕ್ನ ಮರು ಬಳಕೆ ವಿಷಯದ ಬಗೆಗಿನ ಹಾಲಕ್ಕಿ ನೃತ್ಯದಲ್ಲಿ ಶ್ರೇಯ ಸಿ ಎಚ್, ಜೀವಿಕ ಬಿ, ಸಾನ್ವಿ ಬಿ ಎಸ್, ನಿಶಾ ಪಿ ಎಸ್, ವೈಷ್ಣವಿ ಪ್ರಕಾಶ್, ನಿಧಿ ಎ ಜೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ . ಮೊಬೈಲ್ನ ಸದ್ಬಳಕೆ ಬಗೆಗಿನ ಇಂಗ್ಲಿಷ್ ಪಾತ್ರಾಭಿನಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಸೃಜನಾದಿತ್ಯ ಶೀಲ ಕೆ, ಅಭಿಜ್ಞ ಎನ್, ಸಾಕ್ಷಿ ಪಿ ಆರ್, ಅನನ್ಯ ಕೆ ಎನ್, ಗಹನ ಎಸ್ ತೃತೀಯ ಬಹುಮಾನ ಪಡೆದಿರುತ್ತಾರೆ . ತಂಡದ ನಿರ್ದೇಶಕರಾದ ಹಾಗು ಮಾರ್ಗದರ್ಶಕರಾದ ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ, ಶಿಕ್ಷಕರಾದ ಲತಾ ವೆಂಕಟೇಶ್ ಪೈ, ಮಮತಾ ಹಾಗೂ ನಾಗರಾಜ್ ಕುಲಾಲ್ ಪೆರ್ಲಂಪಾಡಿ ಭಾಗವಹಿಸಿದ್ದರು.









